ಅಂದುಕೊಂಡಿದ್ದೊಂದು ಆಗಿದ್ದು ಮತ್ತೊಂದು, ಲಕ್ಷ್ಮೀ ನಿವಾಸ ಸೀರಿಯಲ್‌  ಜಂಬೆ ಅಶೋಕ್‌ ಇಷ್ಟೆಲ್ಲಾ ಓದಿದ್ದಾರಾ? 

By Manjunath B Kotagunasi
Mar 19, 2025

Hindustan Times
Kannada

ಜೀ ಕನ್ನಡದ ಪ್ರಮುಖ ಸೀರಿಯಲ್‌ ಲಕ್ಷ್ಮೀ ನಿವಾಸ ಮೂಲಕ ಫೇಮಸ್‌ ಆದವರು ಜಂಬೆ ಅಶೋಕ್ ‌

ಓದು, ದೇಶ ವಿದೇಶ ಸುತ್ತಾಟ, ರಂಗಭೂಮಿ, ನಟನೆ ಇವುಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ ಅಶೋಕ್

ನಟನೆಯ ಮೂಲಕವೇ ಕಿರುತೆರೆಯ ಗಮನ ಸೆಳೆದ ಅಶೋಕ್‌, ಶೈಕ್ಷಣಿಕವಾಗಿ ಸಾಕಷ್ಟು ಓದಿಕೊಂಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಬಳಿಕ ಐಟಿಐ ಮುಗಿಸಿ ಬಿಇಎಂಎಲ್‌ನಲ್ಲಿ ಎರಡು ವರ್ಷ ಅಪ್ರೆಂಟಿಸ್‌ ಮಾಡಿದ್ದಾರೆ ಜಂಬೆ ಅಶೋಕ್‌

ಅದಾದ ಮೇಲೆ ಬೆಳಗ್ಗೆ ಕೆಲಸ ಮಾಡಿ, ಸಂಜೆ ಹೊತ್ತು ಬೆಂಗಳೂರಿನ ವಿಜಯಾ ಇವನಿಂಗ್ ಕಾಲೇಜಲ್ಲಿ ಪಿಯುಸಿ ಮುಗಿಸಿದ್ದಾರೆ

ಪಿಯುಸಿ ಕಾಮರ್ಸ್‌ ಮುಗಿದ ಬಳಿಕ ಬಿಕಾಂ ಸೇರಿದರೂ, ಆ ಕೋರ್ಸ್‌ ಅಶೋಕ್‌ ಅವರಿಗೆ ಅಷ್ಟಾಗಿ ಒಗ್ಗಲಿಲ್ಲ

ಕಷ್ಟಪಟ್ಟು ಬಿಕಾಂ ಮುಗಿಸಿ, ಕರೆಸ್ಪಾಂಡನ್ಸ್‌ನಲ್ಲಿ ಎಂಎ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಮನಃಶಾಸ್ತ್ರದ ಮೇಲೆಯೂ ಆಸಕ್ತಿ ಹುಟ್ಟಿಕೊಂಡಿತು. ಸೈಕಾಲಜಿ ವಿಷಯದ ಮೇಲೆ ಕರೆಸ್ಪಾಂಡನ್ಸ್‌ ಬಿಎ ಮುಗಿಸಿದರು. 

ಅದಾಗಲೇ ಸಂಗೀತ, ನಾಟಕದ ಆಸಕ್ತಿ ಹೆಚ್ಚಾಗಿತ್ತು. ಡಿಪ್ಲೋಮಾ ಇನ್‌ ಆರ್ಟ್ಸ್‌ ವಿಷಯದ ಮೇಲೆಯೂ ಕೋರ್ಸ್‌ ಮಾಡಿದ್ದಾರೆ ಅಶೋಕ್.‌  

ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ