ವಾಕ್ಚಾತುರ್ಯದಿಂದಲೇ ಗಮನ ಸೆಳೆಯುವ ರಾಶಿಗಳಿವು

By Rakshitha Sowmya
Apr 24, 2024

Hindustan Times
Kannada

ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು ಸದಾ ಚೈತನ್ಯದಿಂದ ಕೂಡಿರುತ್ತಾರೆ. ತಮ್ಮ ಆಕರ್ಷಕ ಮಾತುಗಳಿಂದ ಜನರನ್ನು ಅಯಸ್ಕಾಂತದಂತೆ ಸೆಳೆಯುತ್ತಾರೆ. 

ಸಂವಂಹನ ಗ್ರಹವಾದ ಬುಧನಿಂದ ಆಳಲ್ಪಡುವ ಮಿಥುನ ರಾಶಿಯವರು ಸಾಮಾಜಿಕ ವಲಯದಲ್ಲಿ ಹೆಚ್ಚು ಖ್ಯಾತರಾಗಿರುತ್ತಾರೆ. ಉತ್ಸಾಹಭರಿತ ಚರ್ಚೆಗಳಿಂದ ವಾದ ವಿವಾದಗಳಿಂದ ಇತರರನ್ನು ಆಕರ್ಷಿಸುತ್ತಾರೆ. 

ಗುರು ಗ್ರಹದಿಂದ ನಿಯಂತ್ರಿಸಲ್ಪಡುವ ಧನಸ್ಸು ರಾಶಿಯವರು ಕುತೂಹಲಭರಿತ ಹಾಗೂ ಮಿತಿಯಿಲ್ಲದ ಆಶಾವಾದವನ್ನು ಹೊಂದಿರುತ್ತಾರೆ. ದೂರದ ಪ್ರದೇಶಗಳನ್ನು ಒಬ್ಬಂಟಿಯಾಗಿ ಅನ್ವೇಷಿಸುವ ಮೂಲಕ ಜನರನ್ನು ಬೆರೆಯುತ್ತಾರೆ. 

ನವೀನ ಆಲೋಚನೆಗಳು, ಸ್ವಂತಿಕೆ ಹಾಗೂ ತಮ್ಮದೇ ಪ್ರತ್ಯೇಕ ಯೋಚನೆಯ ಮೂಲಕ ಈ ರಾಶಿಯವರು ಮತ್ತೊಬ್ಬರಿಗೆ ದಾರಿದೀಪವಾಗಿರುತ್ತಾರೆ. ಯುರೇನಸ್‌ ಗ್ರಹದಿಂದ ನಿಯಂತ್ರಿಸಲ್ಪಡುವ ಇವರು ಬುದ್ಧಿವಂತಿಕೆ, ದೂರದೃಷ್ಟಿ ಹೊಂದಿರುತ್ತಾರೆ. 

ತುಲಾ ರಾಶಿಯವರು ಕೂಡಾ ತಮ್ಮ ವಾಕ್ಚಾತುರ್ಯದಿಂದ ಇತರರನ್ನು ಸೆಳೆಯುತ್ತಾರೆ. ಪ್ರೀತಿ ಮತ್ತು ಸೌಂದರ್ಯದ ಗ್ರಹವಾದ ಶುಕ್ರನಿಂದ ಆಳಲ್ಪಡುತ್ತಾರೆ. 

ಕ್ರಿಯೆ ಮತ್ತು ಚೈತನ್ಯದ ಗ್ರಹವಾದ ಮಂಗಳನಿಂದ ಆಳಲ್ಪಡುವ ಮೇಷ ರಾಶಿಯವರು ಸದಾ ನಾಯಕತ್ವ ಸ್ಥಾನದಲ್ಲಿರುತ್ತಾರೆ. ಸದಾ ಹೊಸ ಹೊಸ ಜನರನ್ನು ಭೇಟಿ ಮಾಡಲು ಉತ್ಸುಕರಾಗಿರುತ್ತರೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

IPL 2024: ಭಾರಿ ಅಂತರದ ಗೆಲುವು ದಾಖಲಾದ ಪಂದ್ಯಗಳು