PV Sindhu Birthday: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪಿವಿ ಸಿಂಧು ಶ್ರೀಮಂತ ಕ್ರೀಡಾಪಟು; ಅವರ ಆಸ್ತಿ ಮೌಲ್ಯ ಎಷ್ಟಿದೆ ಗೊತ್ತಾ
By Prasanna Kumar P N Jul 05, 2023
Hindustan Times Kannada
ಭಾರತದ ಹೆಸರಾಂತ ಬ್ಯಾಡ್ಮಿಂಟನ್ ಸೆನ್ಸೇಷನ್ ಪಿವಿ ಸಿಂಧು ಇಂದು (ಜುಲೈ 5, 1995) 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಗಾದರೆ ಅವರ ಆಸ್ತಿ ಮೌಲ್ಯ, ಖಾಸಗಿ ಜೀವನವನ್ನ ಈ ಮುಂದಿನ ನೋಡೋಣ.
ಪಿವಿ ಸಿಂಧು ಹುಟ್ಟಿದ್ದು, ಹೈದರಾಬಾದ್ನಲ್ಲಿ. ತಂದೆ ಪಿವಿ ರಮಣ, ತಾಯಿ ಪಿ ವಿಜಯ.
ಕಳೆದ ವರ್ಷ ನಡೆದ ಕಾಮನ್ವೆಲ್ತ್ನಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದರು.
2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು
2021ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು.
ಪಿವಿ ಸಿಂಧು ಒಟ್ಟು ನಿವ್ವಳ ಮೌಲ್ಯ 8 ಮಿಲಿಯನ್ ಡಾಲರ್ ಅಂದರೆ ಭಾರತದ ಕರೆನ್ಸಿಯಲ್ಲಿ 64 ಕೋಟಿ.
ಪಿವಿ ಸಿಂಧು ಅವರಿಗೆ 2013ರಲ್ಲಿ ಅರ್ಜುನ ಪ್ರಶಸ್ತಿ, 2015ರಲ್ಲಿ ಪದ್ಮಶ್ರೀ ಪ್ರಶಸ್ತಿ, 2016ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ, 2020ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ.
20013ರಲ್ಲಿ ಚೀನಾದ ಗುವಾಂಗ್‌ಝೌನಲ್ಲಿ ನಡೆದ BWF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಿವಿ ಸಿಂಧು, ಕಂಚಿನ ಪದಕ ಗೆದ್ದಿದ್ದರು.
2014 ರಲ್ಲಿ ಸಿಂಧು ತನ್ನ ಮೊದಲ ಪ್ರಮುಖ ಪ್ರಶಸ್ತಿಯಾದ ಮಕಾವು ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಜಯಿಸಿದ್ದರು. ಬಳಿಕ ಮಲೇಷ್ಯಾ ಮಾಸ್ಟರ್ಸ್, ಇಂಡಿಯಾ ಓಪನ್ ಸೇರಿದಂತೆ ಹಲವು ಟೂರ್ನಿ ಗೆದ್ದಿದ್ದಾರೆ.
2017ರಲ್ಲಿ BWF ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ. 2018ರ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ, 2019ರಲ್ಲಿ BWF ವಿಶ್ವ ಚಾಂಪಿಯನ್‌ಶಿಪ್ ಗೆದ್ದರು.
ದೇಶದ ಅತ್ಯಂತ ಪ್ರಭಾವಶಾಲಿ ಮತ್ತು ಯಶಸ್ವಿ ವ್ಯಕ್ತಿಗಳನ್ನು ಗುರುತಿಸುವ ಫೋರ್ಬ್ಸ್ ಇಂಡಿಯಾದ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಿಂಧು ಹೆಸರು ಬಂತು.
ಸಿಂಧು ನಿವ್ವಳ ಮೌಲ್ಯ 64 ಕೋಟಿ, ಮಾಸಿಕ ಆದಾಯ 50 ಲಕ್ಷ +, ವಾರ್ಷಿಕ ಆದಾಯ 6 ಕೋಟಿ ಇದೆ.
ಸಿಂಧು BMW ಕಾರು, BMW X5 SUV ಕಾರು ಹೊಂದಿದ್ದಾರೆ. ಹೈದರಾಬಾದ್ನಲ್ಲಿ ವಾಸಿಸುತ್ತಿರುವ ಸಿಂಧು, ಹೊಸ ಮನೆಯೊಂದನ್ನು ಖರೀದಿಸಿದ್ದಾರೆ.
ಪಿವಿ ಸಿಂಧು ಹೈದರಾಬಾದ್‌ನಲ್ಲೇ ಆಕ್ಸಿಲಿಯಮ್ ಹೈಸ್ಕೂಲಿನಲ್ಲಿ ಆರಂಭಿಕ ಮತ್ತು ಹೈಸ್ಕೂಲ್ ಓದಿದರು. ನಂತರ ಸೇಂಟ್ ಆನ್ಸ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು.