15 ದಿನಗಳಲ್ಲಿ ಉಗುರು ಬೆಳಿಬೇಕು ಅಂದ್ರೆ ಈ ಮನೆಮದ್ದು ಬಳಸಿ ನೋಡಿ
By Reshma Jul 22, 2024
Hindustan Times Kannada
ಸುಂದರ, ಉದ್ದ, ನೀಳ ಉಗುರುಗಳು ಕೈಗಳ ಅಂದ ಹೆಚ್ಚಿಸುವುದು ಸುಳ್ಳಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಉಗುರು ಬೇಗನೆ ತುಂಡಾಗುತ್ತದೆ ಎಂದು ದೂರವವರೇ ಹೆಚ್ಚು.
ತಮ್ಮ ಉಗುರು ಉದ್ದವಾಗಿರಬೇಕು ಎಂದು ಪ್ರತಿ ಹೆಣ್ಣುಮಕ್ಕಳು ಬಯಸುವುದು ಸಹಜ. ನೇಲ್‌ಪಾಲಿಶ್ ಹಾಗೂ ನೇಲ್ ಆರ್ಟ್ ಮೂಲಕ ಉಗುರಿನ ಅಂದ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಉಗುರು ಉದ್ದವಾಗುವುದೇ ಇಲ್ಲ.
ನಿಮಗೆ ಉಗುರು ಬೇಗನೆ ಬೆಳೆಯುತ್ತಿಲ್ಲ ಎಂದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇದರಿಂದ ಉಗುರು ಅಂದವಾಗಿ, ಬೇಗವಾಗಿ ಬೆಳೆಯುತ್ತದೆ.
ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ಉಗುರಿಗೆ ಹಚ್ಚಿ ಚೆನ್ನಾಗಿ ಉಜ್ಜಿ. ರಾತ್ರಿಯಿಡಿ ಈ ಎಣ್ಣೆಯನ್ನು ಹಾಗೇ ಬಿಡಿ.
ನಿಂಬೆರಸದಲ್ಲಿ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ, ಈ ಮಿಶ್ರಣವನ್ನು ಉಗುರು ಬೆಚ್ಚಗಾಗಿರಿಸಿ. ಇದರಲ್ಲಿ ಈ ಉಗುರನ್ನು ಅದ್ದಿ, 15 ನಿಮಿಷಗಳ ಕಾಲ ಇರಿಸಿ. ನಂತರ ಬಿಸಿನೀರಿನಿಂದ ತೊಳೆಯಿರಿ.
ಉಗುರುಗಳ ಮೇಲೆ ಬೆಳ್ಳುಳ್ಳಿಯನ್ನು ಉಜ್ಜುವ ಮೂಲಕವೂ ಉಗುರಿನ ಬೆಳವಣಿಗೆಯನ್ನು ವೃದ್ಧಿಸಬಹುದು. ರಾತ್ರಿ ಉಗುರಿನ ಮೇಲೆ ಬೆಳ್ಳುಳ್ಳಿ ಉಜ್ಜಿ, ಬೆಳಗೆದ್ದು ತೊಳೆಯಿರಿ.
ರಾತ್ರಿ ಮಲಗುವ ಮುನ್ನ ಉಗುರುಗಳಿಗೆ ಆಲಿವ್ ಎಣ್ಣೆಯನ್ನು ಹಚ್ಚಬಹುದು. ಇದು ಉಗುರಿನ ಬೆಳವಣಿಗೆಗೆ ನೆರವಾಗುತ್ತದೆ.
ಕಿತ್ತಳೆ ರಸವನ್ನು ಉಗುರಿಗೆ ಹಚ್ಚಿ. ಇದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಚೆನ್ನಾಗಿ ಒರೆಸಿ ಮಾಯಿಶ್ಚರೈಸರ್ ಹಚ್ಚಿ.
ಈ ಉಪಾಯವನ್ನು ಪಾಲಿಸುವ ಜೊತೆಗೆ ಉಗುರನ್ನು ಸ್ವಚ್ಛ ಮಾಡುವುದು ಕೂಡ ಬಹಳ ಮುಖ್ಯ. ಪ್ರತಿದಿನ ಉಗುರನ್ನು ಸ್ವಚ್ಛ ಮಾಡುವತ್ತ ಗಮನ ಹರಿಸಿ.