ನವಜಾತ ಶಿಶುವಿನ ಪೋಷಕರು ಮಾಡಲೇಬಾರದಂತಹ 7 ತಪ್ಪುಗಳಿವು  

By Reshma
Dec 02, 2024

Hindustan Times
Kannada

ಮಗು ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವವರೆಗೆ ಪೋಷಕರು ಸಾಕಷ್ಟು ಕಾಳಜಿ ವಹಿಸುತ್ತಾರೆ, ಆರೈಕೆ ಮಾಡುತ್ತಾರೆ 

ಆದರೆ ಕೆಲವು ಬಾರಿ ಪೋಷಕರು ನವಜಾತ ಶಿಶುವಿನ ಆರೈಕೆಯ ವಿಚಾರದಲ್ಲಿ ಎಡವುತ್ತಾರೆ

ಮಗುವನ್ನು ನೋಡಿಕೊಳ್ಳುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮಗುವಿಗೆ ತೊಂದರೆಯಾಗಬಹುದು

ಮಗು ಕೊಂಚ ಅತ್ತರೂ ಏನಾದರೂ ಕೊಟ್ಟು ಸಮಾಧಾನ ಮಾಡುವ ಅಭ್ಯಾಸ ಬಿಡಿ. ಮಗು ಸ್ವಲ್ಪ ಅಳುವುದು ಸಹಜ ಪ್ರಕಿಯೆ  

ಕೆಲವು ಪೋಷಕರು ಮಗುವಿನ ಬಗ್ಗೆ ಅತೀವ ಕಾಳಜಿ ಮಾಡುತ್ತಾರೆ. ಇದು ಕೂಡ ಒಳ್ಳೆಯದಲ್ಲ 

ಹಾಲು ಕುಡಿಸುವ ಸಲುವಾಗಿ ನೀವೇ ಮಗುವನ್ನು ಆಗಾಗ ಎಬ್ಬಿಸುವ ಅಭ್ಯಾಸ ಒಳ್ಳೆಯದಲ್ಲ 

ಮೊದಲು ಬಾರಿ ತಾಯಿಯಾದರೂ ಮಗುವಿನ ಆರೈಕೆಯಲ್ಲಿ ತಮ್ಮ ನಿದ್ದೆಯನ್ನು ಮರೆತು ಬಿಡುತ್ತಾರೆ. ಇದು ಕೂಡ ತಪ್ಪು 

ಮಗು ಚಿಕ್ಕದು ಎಂಬ ಕಾರಣಕ್ಕೆ ಪೋಷಕರು ಅದನ್ನು ಹೊರಗಡೆ ಕರೆದುಕೊಂಡು ಹೋಗುವುದೇ ಇಲ್ಲ. ಇದರಿಂದ ಮಗುವಿಗೆ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ 

ಹೊಸತಾಗಿ ತಾಯಿಯಾದವಳು ಮಗುವನ್ನು ಸರಿಯಾಗಿ ಹಿಡಿದುಕೊಳ್ಳುವುದನ್ನು ಕಲಿಯಬೇಕು. ಇಲ್ಲದಿದ್ದರೆ ಮಗುವಿನ ಕುತ್ತಿಗೆಗೆ ತೊಂದರೆಯಾಗಬಹುದು 

ಬೀಳುವ, ಪೆಟ್ಟು ಮಾಡಿಕೊಳ್ಳುವ ಭಯದಲ್ಲಿ ಪೋಷಕರು ಮಗುವನ್ನು ನೆಲದ ಮೇಲೆ ಬಿಡಲು ಹಿಂಜರಿಯುತ್ತಾರೆ. ಆದರೆ ಇದು ಕೂಡ ತಪ್ಪು 

ಚಳಿಗಾಲದಲ್ಲಿ ದೇಹ ತಣ್ಣಗಾದಾಗ ಕೀಲು ನೋವು, ದೇಹ ನೋವು ಶುರುವಾಗುತ್ತದೆ. ಹೀಗಾಗಿ ಶೀತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು.

Pexel