ಚಳಿಗಾಲದಲ್ಲಿ ದಕ್ಷಿಣ ಭಾರತ ಶೈಲಿಯ ಈ ಟೊಮೆಟೊ, ಬೆಳ್ಳುಳ್ಳಿ ರಸಂ ಟ್ರೈ ಮಾಡಿ
By Raghavendra M Y Jan 02, 2024
Hindustan Times Kannada
ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುವ ದಕ್ಷಿಣ ಭಾರತ ಶೈಲಿಯ ರಸಂ ಮನೆಯಲ್ಲೇ ತಯಾರಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ
ರಸಂ ದಕ್ಷಿಣ ಭಾರತದ ಸಾಂಪ್ರದಾಯಿಕ ಸೂಪ್ ಆಗಿದ್ದು, ಶೀತ, ಕೆಮ್ಮ ಸೇರಿದಂತೆ ಕೆಲವು ರೋಗಗಳ ವೇಳೆ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತೆ
ಮೊದಲು ರಸಂಗೆ ಬೇಕಾಗುವ ಪದಾರ್ಥಗಳನ್ನು ಸಿದ್ಧಪಡಿಸಿಕೊಳ್ಳಿ
ಸಣ್ಣ ಗಾತ್ರದ 3 ಟೊಮೆಟೊ, 8 ರಿಂದ 10 ಸುಳಿದ ಬೆಳ್ಳುಳ್ಳಿ, ಸ್ವಲ್ಪ ಹುಣಸೆಹಣ್ಣು, ಸ್ವಲ್ಪ ಸಾಸಿವೆಕಾಳು, 1 ಚಮಚ ಶಂಠಿ, 1 ಟೀಸ್ಫೂನ್ ಜೀರಿಗೆ, ಟೀಸ್ಪೂನ್ ಮೆಂತ್ಯ ಬೀಜ, 2-3 ಒಣ ಮೆಣಸಿನಕಾಯಿ, 1 ಚಿಟಿಕೆ ಹಿಂಗು, 10 ಕರಿಬೇವಿನ ಎಲೆಗಳು
1 ಕಪ್ ಕಡಲೆ ಬೇಳೆ, ಅರ್ಧ ಚಮಚ ಅರಿಶಿನ, 1 ಟೀಸ್ಪೂನ್ ಕರಿ ಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, 1 ರಿಂದ 2 ಚಮಚ ತುಪ್ಪ ಅಥವಾ ಎಣ್ಣೆ ಪಾತ್ರೆಯಲ್ಲಿ ಕಾಯಿಸಿಕೊಳ್ಳಿ, ಅಗತ್ಯಕ್ಕೆ ತಕ್ಕಷ್ಟು ನೀರು
ರಸಂ ಮಾಡುವ ವಿಧಾನ 1 - ಮೊದಲು ಟೊಮೆಟೊ ಚೆನ್ನಾಗಿ ತೊಳೆದ ನಂತರ ಕಟ್ ಮಾಡಿ ಇಟ್ಟುಕೊಳ್ಳಿ. ಇತರೆ ಪದಾರ್ಥಗಳನ್ನು ತೊಳೆದು ಸಿದ್ಧಪಡಿಸಿಕೊಳ್ಳಿ
ರಸಂ ಮಾಡುವ ವಿಧಾನ 2 - ಬಿಸಿ ನೀರಿನಲ್ಲಿ ಹುಣಸೆಹಣ್ಣನನ್ನು 15 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಹುಳಿ ನೀರನ್ನು ಪ್ರತ್ಯೇಕವಾಗಿ ಕಪ್‌ನಲ್ಲಿ ಇಟ್ಟುಕೊಳ್ಳಿ
ವಿಧಾನ 3 - ಪಾತ್ರೆಯನ್ನ ಸ್ಟೌವ್ ಮೇಲೆ ಇಟ್ಟು ಅದಕ್ಕೆ ಟೊಮೆಟೊ ಹಾಕಿ, ಬೆಳ್ಳುಳ್ಳಿಯನ್ನು ಹಾಕಿ, ಅರಿಶಿನ ಮತ್ತು ಉಪ್ಪನ್ನು ಹಾಕಿ. ಪಾತ್ರೆಯಲ್ಲಿ ಟೊಮೆಟೊ ಮುಚ್ಚಿಕೊಳ್ಳುವಷ್ಟು ನೀರನ್ನು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ
ವಿಧಾನ 4 - ಟೊಮೆಟೊ ಚೆನ್ನಾಗಿ ಬೆಂದ ನಂತರ ಬೆಳ್ಳುಳ್ಳಿ ಸೇರಿದಂತೆ ಇತರೆ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಹುಣಸೆಹಣ್ಣಿನ ರಸ, ಶುಂಠಿ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿದ ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿದ ನಂತರ ಕಡಿಮೆ ಬೆಂಕಿಯಲ್ಲಿ ಸ್ವಲ್ಪ ಕಾಯಿಸಿ
ವಿಧಾನ 5 - ನಂತರ ಸ್ಪೂನ್‌ನಲ್ಲಿ ಚೆನ್ನಾಗಿ ಕಲಿಸಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಬಿಸಿ ಬಿಸಿ ಅನ್ನಕ್ಕೆ ಕಲಿಸಿಕೊಂಡು ತಿನ್ನಿ