ದಾಂಪತ್ಯ ಜೀವನದ ಖುಷಿ ಹೆಚ್ಚಿಸುವ 6 ಆಹಾರಗಳಿವು

By Reshma
Oct 17, 2024

Hindustan Times
Kannada

ಮನುಷ್ಯನ ದೇಹಕ್ಕೆ ಟೆಸ್ಟೊಸ್ಟೆರಾನ್ ಅಗತ್ಯ ಹಾರ್ಮೋನು, ಇದು ಕಡಿಮೆಯಾದರೆ ಪುರುಷರ ದೇಹದಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಇದು ವೀರ್ಯ ಉತ್ಪಾದನೆ ಮತ್ತು ಸ್ನಾಯುಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಟೆಸ್ಟೋಸ್ಟೆರಾನ್ ಬಹಳ ಮುಖ್ಯ. ಈ ಹಾರ್ಮೋನ್ ಹೆಚ್ಚಿಸುವ ಆಹಾರಗಳಿವು 

ಸಾಲ್ಮನ್ ಮತ್ತು ಸಾರ್ಡಿನ್‌ನಂತಹ ಕೊಬ್ಬಿನಾಂಶ ಇರುವ ಮೀನುಗಳು ವಿಟಮಿನ್ ಡಿ, ಸತು ಮತ್ತು ಒಮೆಗಾ –3  ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟ ಸುಧಾರಿಸುತ್ತದೆ 

ಪಾಲಕ್‌ನಂತಹ ಸೊಪ್ಪು ತರಕಾರಿಗಳು ಮೆಗ್ನಿಶಿಯಂ ಸೇರಿದಂತೆ ಪ್ರಮುಖ ಜೀವಸತ್ವಗಳು ಹಾಗೂ ಖನಿಜಾಂಶವನ್ನು ಹೊಂದಿರುತ್ತದೆ. ಇದು ಟೆಸ್ಟೊಸ್ಟೆರಾನ್ ಹಾರ್ಮೋನ್ ಹೆಚ್ಚಲು ಸಹಾಯ ಮಾಡುತ್ತದೆ 

ಸ್ಟ್ರಾಬೆರಿ ಹಾಗೂ ಬ್ಲೂಬ್ರೆರಿಗಳು ಫ್ಲೇವನಾಯ್ದ್‌ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಟೆಸ್ಟೊಸ್ಟೆರಾನ್ ಮಟ್ಟ ಏರಿಕೆಯಾಗುತ್ತದೆ

ಮೊಟ್ಟೆಯಲ್ಲಿ ಪ್ರೊಟೀನ್ ಮತ್ತು ಸೆಲೆನಿಯಂ ಸಮೃದ್ಧವಾಗಿದೆ. ಇದು ಕೂಡ ಟೆಸ್ಟೊಸ್ಟೆರಾನ್ ಹೆಚ್ಚಲು ಸಹಕಾರಿ 

ಅವಕಾಡೊ ಅಥವಾ ಬೆಣ್ಣೆಹಣ್ಣಿನಲ್ಲಿ ಮೆಗ್ನಿಶಿಯಂ, ಬೊರಾನ್ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಇರುತ್ತದೆ. ಇದು ಟೆಸ್ಟೊಸ್ಟೆರಾನ್ ಮಟ್ಟ ಹೆಚ್ಚಲು ಸಹಾಯ ಮಾಡುತ್ತದೆ 

ದಾಳಿಂಬೆಯು ಆಂಟಿಆಕ್ಸಿಡೆಂಟ್‌ಗಳಲ್ಲಿ ಪ್ರಮುಖವಾದ ಜೀವಸತ್ವಗಳು ಹಾಗೂ ಖನಿಜಗಳನ್ನು ಹೊಂದಿದೆ. ಇದು ಕೂಡ ಟೆಸ್ಟೊಸ್ಟೆರಾನ್ ಹೆಚ್ಚಿಸುತ್ತದೆ

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ