ಸಿರಿಧಾನ್ಯಗಳ ಚಪಾತಿ ಸೇವನೆಯಿಂದ ಸಿಗುವ 7 ಆರೋಗ್ಯ ಪ್ರಯೋಜನಗಳಿವು
By Raghavendra M Y
Oct 03, 2024
Hindustan Times
Kannada
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಗೋಧಿ ಹಿಟ್ಟಿನ ಚಪಾತಿ ಬದಲಾಗಿ ಸಿರಿಧಾನ್ಯಗಳ ಆಹಾರಕ್ಕೆ ಆದ್ಯತೆ ನೀಡುತ್ತಿದ್ದಾರೆ
ಸಿರಿಧಾನ್ಯಗಳನ್ನು ಬಳಸಿ ರೊಟ್ಟಿ ತಯಾರಿಸಲಾಗುತ್ತೆ. ಇದನ್ನು ತಿಂದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಗಿಳಿವೆ
ಈ ಪ್ರಯೋಜನಗಳನ್ನು ತಿಳಿದರೆ ನೀವು ಇನ್ಮುಂದೆ ಸರಿ ಧಾನ್ಯಗಳ ಚಪಾತಿಯನ್ನು ತಿನ್ನಲು ಪ್ರಾರಂಭಿಸುತ್ತೀರಿ
ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು ಸಮೃದ್ದವಾಗಿರುತ್ತವೆ. ಸಿರಿಧಾನ್ಯಗಳ ಚಪಾತಿ ತಿನ್ನುವುದರಿಂದ ಹೊಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ
ಸಿರಿಧಾನ್ಯಗಳ ಹಿಟ್ಟಿನಿಂದ ಮಾಡಿದ ರೊಟ್ಟಿ ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಸಿರಿಧಾನ್ಯಗಳ ರೊಟ್ಟಿ ಸೇವಿಸಿ
ಸಿರಿಧಾನ್ಯಗಳ ರೊಟ್ಟಿ ಅಥವಾ ಚಪಾತಿ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು, ಹೃದಯದ ಆರೋಗ್ಯ ಕಾಪಾಡುತ್ತೆ
ಗ್ಲೈಸೆಮಿಕ್ ಅಂಶ ಸಿರಿಧಾನ್ಯಗಳ ಹಿಟ್ಟಿನಲ್ಲಿ ಕಡಿಮೆ ಇರುತ್ತದೆ. ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದು
ಮಲ್ಟಿಗ್ರೈನ್ ಗ್ಲುಟನ್ ಮುಕ್ತವಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತೆ. ಇದನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ
ಸಿರಿಧಾನ್ಯಗಳ ಚಪಾತಿ ಅಥವಾ ರೊಟ್ಟಿ ತಿನ್ನುವುದರಿಂದ ದೇಹ ದಿನವೀಡಿ ಶಕ್ತಿಯುತವಾಗಿರುತ್ತೆ
ಮಲ್ಟಿಗ್ರೈನ್ ಹಿಟ್ಟಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗುತ್ತೆ
Top 10 movies: ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ 10 ಸಿನಿಮಾಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ