Top 10 movies: ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ 10 ಸಿನಿಮಾಗಳಿವು
By Praveen Chandra B Dec 19, 2024
Hindustan Times Kannada
ರೆಡ್ ಒನ್: ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ "ರೆಡ್ ಒನ್" ಸಿನಿಮಾವು ಟಾಪ್ 1ರಲ್ಲಿ ಇದೆ. ಇದು ಕ್ರಿಸ್ಮಸ್ ಹಿನ್ನೆಲೆಯ ಕಥೆ.
ಗರ್ಲ್ಸ್ ವಿಲ್ ಬಿ ಗರ್ಲ್ಸ್ (Girls Will be girls) ಎಂಬ ಸಿನಿಮಾ ಟಾಪ್ 2ನಲ್ಲಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಮೆಕ್ಯಾನಿಕ್ ರಾಕಿ:ವಿಶ್ವಕ್ ಸೇನ್ ಅವರ ಇತ್ತೀಚಿನ ಚಿತ್ರ ಮೆಕ್ಯಾನಿಕ್ ರಾಕಿ. ಮೀನಾಕ್ಷಿ ಚೌಧರಿ ಮತ್ತು ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ನಾಯಕಿಯರು. ಈ ಸಿನಿಮಾವೂ ಇಂದು ಅಗ್ರ ಮೂರನೇ ಸ್ಥಾನದಲ್ಲಿದೆ.
ಕಂಗುವಾ: ತಮಿಳಿನ ಸ್ಟಾರ್ ಹೀರೋ ಸೂರ್ಯ ಅವರ ಫ್ಯಾಂಟಸಿ ಆ್ಯಕ್ಷನ್ ಸಿನಿಮಾ 'ಕಂಗುವಾ' ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದೀಗ ಅಗ್ರ ನಾಲ್ಕನೇ ಸ್ಥಾನದಲ್ಲಿದೆ.
ಅಗ್ನಿ: ಅಗ್ನಿ ಎಂಬ ಥ್ರಿಲ್ಲರ್ ಸಿನಿಮಾವು ಈ ತಿಂಗಳ ಮೊದಲ ವಾರದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಒಟಿಟಿಯಲ್ಲಿ ಈಗ ಐದನೇ ಸ್ಥಾನಕ್ಕೆ ಜಾರಿದೆ.
ಮಟ್ಕಾ: ವರುಣ್ ತೇಜ್, ಮೀನಾಕ್ಷಿ ಚೌಧರಿ, ನೊರಾ ಫತೇಹಿ ಮುಂತಾದವರು ನಟಿಸಿರುವ, ಕರುಣಾ ಕುಮಾರ್ ನಿರ್ದೇಶನದ ಮಟ್ಕಾ ಸಿನಿಮಾವು ಆರನೇ ಸ್ಥಾನದಲ್ಲಿದೆ.
ಪುಷ್ಪ: ದಿ ರೈಸ್: ಅಲ್ಲು ಅರ್ಜುನ್ ನಟನೆಯ ಪುಷ್ಪ ದಿ ರೂಲ್ ಸಿನಿಮಾವು ಒಂದೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಪುಷ್ಪದ ಮೊದಲ ಭಾಗ ಟ್ರೆಂಡಿಂಗ್‌ನಲ್ಲಿದೆ. ಅಮೆಜಾನ್ ಪ್ರೈಮ್‌ನಲ್ಲಿ ಅಗ್ರ ಆರನೇ ಸ್ಥಾನದಲ್ಲಿದೆ.
ವೆಟ್ಟೈಯನ್: ರಜನಿಕಾಂತ್ ನಟನೆಯ ವೆಟ್ಟೈಯನ್ ನಂತರದ ಸ್ಥಾನದಲ್ಲಿದೆ.
ಸ್ತ್ರೀ 2: ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸ್ತ್ರೀ 2 ಸಿನಿಮಾವು ಅಮೆಜಾನ್ ಪ್ರೈಮ್ ವಿಡಿಯೋದ ಟಾಪ್ 9ರಲ್ಲಿದೆ.
ಕಧ ಇನ್ನುವರೆ: ಈ ಮಲಯಾಳಂ ಸಿನಿಮಾ ಟಾಪ್ 10ನಲ್ಲಿದೆ.
ಕರ್ನಾಟಕದಲ್ಲಿ ಹತ್ತು ವರ್ಷದಲ್ಲಿ ಮೃತಪಟ್ಟ ಹುಲಿ ಎಷ್ಟಿರಬಹುದು. ಚಿತ್ರ: ಸುನೀಲ್ ನಾಯಕ್