ನಾಳೆ (ಜ 22) ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದೆ. ಈ ಐತಿಹಾಸಿಕ ಸಂಭ್ರಮದ ದಿನಕ್ಕೆ ಅಯೋಧ್ಯೆ ಅದ್ಧೂರಿಯಾಗಿ ಸಿದ್ಧವಾಗಿದೆ.
ದೇಶದಾದ್ಯಂತ ಇರುವ ರಾಮಭಕ್ತರು ಬಾಲರಾಮನನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ನೀವು ಅಯೋಧ್ಯೆಗೆ ಬರುತ್ತಿರಾದರೆ ನಿಮಗಾಗಿ ಇಲ್ಲಿದೆ ರೂಪ್ ಮ್ಯಾಪ್.
ವಿಮಾನದ ಮೂಲಕ ಬರುವವರು: ಬಾಲರಾಮನ ಪ್ರಾಣಪ್ರತಿಷ್ಠೆಯ ದಿನದಂದು ಹಲವು ಏರ್‌ಲೈನ್ಸ್‌ಗಳು ಅಯೋಧ್ಯೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿವೆ.
ಅಯೋಧ್ಯೆಗೆ ಬರುವವರು ಲಕ್ನೋದಲ್ಲಿರುವ ಚೌದರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಮಹಾಯೋಗಿ ಗೋಖರ್‌ನಾಥ್ ವಿಮಾನ ನಿಲ್ದಾಣ ಗೋಖರ್‌ಪುರ್ ಇಲ್ಲಿಗೆ ಬಂದು ಕೂಡ ಅಯೋಧ್ಯೆ ತಲುಪಬಹುದು. ಪ್ರಯಾಗ್‌ರಾಜ್ ಅಥವಾ ವಾರಾಣಸಿ ವಿಮಾನ ನಿಲ್ದಾಣದ ಮೂಲಕವೂ ಅಯೋಧ್ಯೆ ತಲುಪಬಹುದು.
ರೈಲು ದಾರಿ: ದೇಶದ ವಿವಿಧ ಭಾಗಗಳಿಂದ ಅಯೋಧ್ಯೆಗೆ ರೈಲು ಸಂಪರ್ಕವಿದೆ. ಫೈಜಾಬಾದ್ ಅಥವಾ ಅಯೋಧ್ಯೆ ರೈಲು ನಿಲ್ದಾಣದ ಮೂಲಕ ಅಯೋಧ್ಯೆ ನಗರವನ್ನು ತಲುಪಬಹುದು.
ರಸ್ತೆಮಾರ್ಗ: ಉತ್ತರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಅಯೋಧ್ಯೆಗೆ ಸಂಪರ್ಕ ಹೊಂದಿವೆ. ಲಕ್ನೊ, ದೆಹಲಿ, ವಾರಣಾಸಿ, ಪ್ರಯಾಗ್‌ರಾಜ್, ಗೋಖರ್‌ಪುರಗಳಿಂದ ಅಯೋಧ್ಯೆಗೆ ಬಸ್ ಸಂಪರ್ಕವಿದೆ.
ಅಯೋಧ್ಯೆಯೊಳಗಿನ ಸಂಪರ್ಕ: ಅಯೋಧ್ಯೆ ನಗರ ತಲುಪಿದ ಮೇಲೆ ಅಲ್ಲಿನ ಸುತ್ತಲಿನ ಜಾಗದಲ್ಲಿ ಸುತ್ತಾಡುವುದು ಹಾಗೂ ರಾಮಮಂದಿರ ತಲುಪಲು ಆಟೊ ರಿಕ್ಷಾ ಹಾಗೂ ಸೈಕಲ್ ರಿಕ್ಷಾಗಳಿವೆ.