ನೀವು ಖರೀದಿಸಿದ ಶುಂಠಿ ಅಸಲಿಯೋ ನಕಲಿಯೋ, ಹೀಗೆ ಪರೀಕ್ಷಿಸಿ 

By Reshma
Nov 30, 2024

Hindustan Times
Kannada

ಚಳಿಗಾಲದಲ್ಲಿ ಶುಂಠಿ ಬಳಕೆ ಹೆಚ್ಚು. ಇದು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ

ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಶುಂಠಿ ಹಾವಳಿ ಶುರುವಾಗಿದೆ 

ನೀವು ಖರೀದಿಸಿದ ಶುಂಠಿ ಅಸಲಿಯೋ, ನಕಲಿಯೋ ತಿಳಿಯಬೇಕು ಅಂದರೆ ಈ ಟಿಪ್ಸ್ ಟ್ರೈ ಮಾಡಿ 

ಶುಂಠಿಯನ್ನು ಉಗುರಿನಿಂದ ಕೆರೆದು ನೋಡಿ. ಸಿಪ್ಪೆ ಕಿತ್ತು ಬಂದರೆ ಅದು ಅಸಲಿ ಶುಂಠಿ ಎಂದರ್ಥ 

ಶುಂಠಿಯನ್ನು ಉಗುರುನಿಂದ ಕೆರೆದರೆ ಕಟುವಾದ ವಾಸನೆ ಉಗುರು, ಬೆರಳಿಗೆ ಅಂಟಿಕೊಂಡರೆ ಅದು ನಕಲಿಯಲ್ಲ 

ಬೆಟ್ಟದ ಮರದ ಬೇರನ್ನು ಶುಂಠಿ ರೂಪದಲ್ಲಿ ಮಾರುಕಟ್ಟೆ ಮಾರುತ್ತಿದ್ದಾರೆ ಹಾಗಾಗಿ ವಾಸನೆ ಗುರುತಿಸುವುದು ಬಹಳ ಮುಖ್ಯ 

ಶುಂಠಿಯ ಮೇಲ್ಮೈ ಹೆಚ್ಚು ಕೊಳೆಯಾಗಿದ್ದರೆ, ಮೃದುವಾಗಿದ್ದರೆ ಅಂತಹ ಶುಂಠಿಯನ್ನು ಖರೀದಿಸದೇ ಇರುವುದು ಉತ್ತಮ 

ಶುಂಠಿಯ ಮೇಲ್ಮೈಯನ್ನು ಆಸ್ಯಿಡ್‌ನಿಂದ ಸ್ವಚ್ಛ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ 

ಶುಂಠಿಯನ್ನು ಮನೆಗೆ ತಂದ ನಂತರ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ನಂತರ ಇದನ್ನು ಡಬ್ಬಿಯಲ್ಲಿ ಅಥವಾ ಕವರ್‌ನಲ್ಲಿ ಹಾಕಿಡಿ 

All photos: Pixabay

ಭಾರತದ ದಿಗ್ಗಜ ಕ್ರಿಕೆಟಿಗರ ನೆಚ್ಚಿನ ಹವ್ಯಾಸಗಳು