ಆಸ್ಪತ್ರೆಯ ದೈನಂದಿನ ಖರ್ಚು ಸರಿದೂಗಿಸಲು  ಹಾಸ್ಪಿಟಲ್‌ ಕ್ಯಾಶ್‌ ಇನ್ಶೂರೆನ್ಸ್‌ ಪಾಲಿಸಿ ನೆರವಾಗುತ್ತದೆ.

By Praveen Chandra B
Aug 15, 2023

Hindustan Times
Kannada

ಅನಾರೋಗ್ಯ ಅಥವಾ ಗಾಯದ ಕಾರಣದಿಂದ ಆಸ್ಪತ್ರೆ ಸೇರಿರುವ ಪಾಲಿಸಿದಾರರ ಪ್ರತಿದಿನ ಆಸ್ಪತ್ರೆ ಖರ್ಚಿಗೆ ನಿಗದಿತ ಹಣ ನೀಡುವ ವಿಮಾ ಯೋಜನೆ ಇದಾಗಿದೆ. 

ಆಸ್ಪತ್ರೆಯಲ್ಲಿ ಇರುವಷ್ಟು ದಿನ ಪಾಲಿಸಿದಾರರಿಗೆ ಈ ಮೊದಲೇ ತಿಳಿಸಿದಂತೆ ನಿಗದಿತ ನಗದು ಪ್ರಯೋಜನವನ್ನು ನೀಡಲಾಗುತ್ತದೆ. ವೈದ್ಯಕೀಯೇತರ ಖರ್ಚುಗಳನ್ನು ಭರಿಸಲು ಇದು ನೆರವಾಗುತ್ತದೆ. 

ಆಸ್ಪತ್ರೆ ಪ್ರಯಾಣ, ಊಟ ತಿಂಡಿ, ಆಸ್ಪತ್ರೆಯಲ್ಲಿ ವಾಸ, ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಉಳಿದುಕೊಳ್ಳುವ ಖರ್ಚು ಇತ್ಯಾದಿ ವೈದ್ಯಕೀಯೇತರ ಖರ್ಚುಗಳನ್ನು ಭರಿಸಲು ಇದು ಪ್ರಯೋಜನವಾಗುತ್ತದೆ. 

ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿಯಲ್ಲಿ ಹಣಕಾಸು ಕಷ್ಟ ತಪ್ಪಿಸಲು ಈ ಹಾಸ್ಪಿಟಲ್‌ ಕ್ಯಾಶ್‌ ವಿಮಾ ಪಾಲಿಸಿ ನೆರವಾಗುತ್ತದೆ. 

ಸಾಮಾನ್ಯವಾಗಿ ಇತರೆ ವೈದ್ಯಕೀಯ ವಿಮೆಗಳಲ್ಲಿ ವೈದ್ಯಕೀಯ ಖರ್ಚುಗಳನ್ನು ಮಾತ್ರ ಭರಿಸಲಾಗುತ್ತದೆ. ಅಲ್ಲಿ ಆಸ್ಪತ್ರೆ ವಾಸದ ಇತರೆ ಖರ್ಚುಗಳನ್ನು ಪರಿಗಣಿಸಲಾಗುವುದಿಲ್ಲ. 

ಈ ನಗದು ಪ್ರಯೋಜನ ಪಡೆಯಲು ಪೂರ್ವ ಅನುಮತಿ ಪಡೆಯಬೇಕಾಗಿಲ್ಲ. ಆಸ್ಪತ್ರೆ ಸೇರಿದ ಬಳಿಕ ನಿಗದಿತ ಹಣ ದೊರಕುತ್ತದೆ. 

ಈ ರೀತಿ ಪಡೆದ ಹಣವು ತೆರಿಗೆ ರಹಿತವಾಗಿರುತ್ತದೆ. ಇದರಿಂದ ಬಳಕೆದಾರರಿಗೆ ಹೆಚ್ಚುವರಿ ಹಣಕಾಸು ದೊರಕಿದಂತೆ ಆಗುತ್ತದೆ. 

ತಮ್ಮ ಅಗತ್ಯಗಳಿಗೆ ತಕ್ಕಂತೆ ವಿವಿಧ ಬಗೆಯ ನಗದು ಪ್ರಯೋಜನಗಳನ್ನು ಈ ವಿಮೆಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ತಕ್ಕಂತೆ ವಿಮಾ ಕಂತು ಇರುತ್ತದೆ. 

ಎಲ್ಲಾದರೂ ಆರೋಗ್ಯಸೇವೆ ವೆಚ್ಚ ಬಂದಾಗ ಪ್ರತಿನಿತ್ಯದ ಖರ್ಚಿನ ಜತೆಗೆ ಹೆಚ್ಚುವರಿ ಖರ್ಚಾಗುವುದನ್ನು ತಪ್ಪಿಸಲು ಈ ವಿಮೆ ನೆರವಾಗುತ್ತದೆ. 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ