ಬೆಟ್ಟದ ಮೇಲಿರುವ ಶ್ರೀಕಾಂತೇಶ್ವರ ದೇವಸ್ಥಾನ ಮತ್ತು ನಂದಿ ಮಂಟಪವನ್ನು ನೋಡಬಹುದಾಗಿದೆ. 

By Umesha Bhatta P H
Apr 12, 2024

Hindustan Times
Kannada

ಮೋಡವಿಲ್ಲದ ಸ್ಪಷ್ಟ ಹವಾಮಾನದ ದಿನಗಳಲ್ಲಿ ಸುಂದರವಾದ ಸಹ್ಯಾದ್ರಿ ಬೆಟ್ಟಗಳ ಅದ್ಭುತ ನೋಟಗಳನ್ನು ಕವಲೆದುರ್ಗದ ತುತ್ತ ತುದಿಯಿಂದ ನೋಡಬಹುದಾಗಿದೆ. 

ಕವಲೆದುರ್ಗವನ್ನು ಹತ್ತಿ ಇಳಿಯುವುದು ದೈಹಿಕವಾಗಿ ಸದೃಢವಾಗಿರುವವರಿಗೆ ಎರಡು ಮೂರು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.

ಪಾದಯಾತ್ರೆ ಮತ್ತು ಚಾರಣದ ಅನುಭವ ನಿಜಕ್ಕೂ ಮೋಹಕ:. ಕವಲೆದುರ್ಗ ಕೋಟೆಯ ಮೇಲ್ಭಾಗದವರೆಗೆ ನಡೆಯುವುದು ಆಹ್ಲಾದಕರ  ಎನ್ನಿಸುತ್ತದೆ

ಕವಲೆದುರ್ಗ 9 ನೇ ಶತಮಾನದ ಐತಿಹಾಸಿಕ ಕೋಟೆ ಮತ್ತು ಕಡಿಮೆ ಪ್ರಸಿದ್ದಿ, ಜನಸಂದಣಿಯ ಕಾರಣ ಅನನ್ಯ ತಾಣವಾಗಿತ್ತು. ಬೆಟ್ಟದ ಮೇಲೆ ನಿರ್ಮಿಸಿರುವ ಕೋಟೆ ಇದಕ್ಕೆ ಕಾರಣ

ಕವಲೆದುರ್ಗ ಕೋಟೆ ಮಲೆನಾಡು (ಪಶ್ಚಿಮ ಘಟ್ಟ) ದ ಗುಪ್ತ ರತ್ನಗಳಲ್ಲಿ ಒಂದಾಗಿದೆ.  ಇಲ್ಲಿನ ಹಸಿರಿನ ವಾತಾವರಣಕ್ಕೆ ಮನ ಸೋಲದವರೇ ಇಲ್ಲ

ತೀರ್ಥಹಳ್ಳಿ - ಸಾಲೂರು ಮಾರ್ಗವಾಗಿ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ  ಕವಲೆ ದುರ್ಗ ಸಿಗುತ್ತದೆ

ಕೆಳದಿ ಸಂಸ್ಥಾನದ ಅನೇಕ ಐತಿಹ್ಯ ಹಾಗೂ ಅಂದಿನ ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿಗಳಿಗೆ ಈ ಕೋಟೆ ಸಾಕ್ಷಿಯಂತಿದೆ.

 9ನೇ ಶತಮಾನದ ಕೋಟೆ ಇಲ್ಲಿದೆ. ಇದು ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿದ್ದನ್ನು ಇತಿಹಾಸಲದಲ್ಲಿ ಉಲ್ಲೇಖಿಸಲಾಗಿದೆ. 

ಕವಲೆದುರ್ಗ ತೀರ್ಥಹಳ್ಳಿಯಿಂದ 18 ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು 8೦ ಕಿ.ಮೀ ದೂರದಲ್ಲಿದೆ. 

ಕವಲೇದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಸಿರಿನಿಂದ ಸಮೃದ್ಧವಾದ ಪ್ರವಾಸಿ ತಾಣ

ಚಳಿಗಾಲದಲ್ಲಿ ಹೆಚ್ಚು ಈರುಳ್ಳಿ ತಿನ್ನುವುದರಿಂದಾಗುವ ಪ್ರಯೋಜನಗಳಿವು