ಚಳಿಗಾಲದಲ್ಲಿ ಹೆಚ್ಚು ಈರುಳ್ಳಿ ತಿನ್ನುವುದರಿಂದಾಗುವ ಪ್ರಯೋಜನಗಳಿವು
By Reshma
Dec 23, 2024
Hindustan Times
Kannada
ಆಹಾರದ ರುಚಿ ಹೆಚ್ಚಿಸುವ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ
ಅದರಲ್ಲೂ ಚಳಿಗಾಲದಲ್ಲಿ ಈರುಳ್ಳಿ ಸೇವನೆಯ ಪ್ರಮಾಣ ಹೆಚ್ಚಿಸಬೇಕು ಅಂದು ತಜ್ಞರು ಸಲಹೆ ನೀಡುತ್ತಾರೆ
ಹಾಗಾದರೆ ಚಳಿಗಾಲದಲ್ಲಿ ಹೆಚ್ಚು ಈರುಳ್ಳಿ ತಿನ್ನಬೇಕು ಅನ್ನೋದಕ್ಕೆ ಕಾರಣವೇನು ನೋಡಿ
ಈರುಳ್ಳಿಯಲ್ಲಿ ಫೈಟೊಕೆಮಿಕಲ್ಸ್ ಅಂಶವಿದ್ದು ಇದು ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ
ಈರುಳ್ಳಿಯಲ್ಲಿ ಫೋಲೆಟ್ ಅಂಶ ಸಮೃದ್ಧವಾಗಿದ್ದು ಇದು ಚಳಿಗಾಲದಲ್ಲಿ ಖಿನ್ನತೆಯನ್ನು ಎದುರಿಸಲು ನೆರವಾಗುತ್ತದೆ
ಚಳಿಗಾಲದಲ್ಲಿ ಹಸಿ ಈರುಳ್ಳಿಯ ತುಂಡನ್ನು ಮೂಗಿನ ಬಳಿ ಹಿಡಿದು ಉಸಿರಾಡುವುದರಿಂದ ಮೂಗು ಸೋರುವ ಸಮಸ್ಯೆ ನಿವಾರಣೆಯಾಗುತ್ತದೆ
ಈರುಳ್ಳಿ ಸೇವನೆಯಿಂದ ಬಾಯಿಯ ದುರ್ವಾಸನೆ ಸೇರಿದಂತೆ ದಂತಕ್ಷಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಬಹುದು
ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ಅಂಶವು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ
ಈರುಳ್ಳಿ ಕೆಟ್ಟ ಕೊಲೆಸ್ಟಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಈರುಳ್ಳಿ ಉತ್ತಮ
ಈರುಳ್ಳಿಯಲ್ಲಿರುವ ಕ್ರೋಮಿಯಂ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಮತ್ತು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ.
ಹಸಿರು ಗಾಜಿನ ಬಳೆ ತೊಟ್ಟು; ಕೆಂಪು ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ ಭೂಮಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ