ಕಾರ್ತಿಕ ಮಾಸದಲ್ಲಿ ಗುರು ಪುಷ್ಯ ನಕ್ಷತ್ರ ಯಾವಾಗ? ಮಹತ್ವ ತಿಳಿಯಿರಿ
By Raghavendra M Y Oct 23, 2024
Hindustan Times Kannada
ಹಿಂದೂ ಧರ್ಮದ 27 ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರವು 8ನೇ ಸ್ಥಾನದಲ್ಲಿದೆ. ಗುರುವಾರ ಪುಷ್ಯ ನಕ್ಷತ್ರ ಉದಯಿಸಿದಾಗ ಈ ಸಂಯೋಜನೆ ಗುರು ಪುಷ್ಯ ಯೋಗ ಎಂದು ಕರೆಯಲಾಗುತ್ತೆ
ಜ್ಯೋತಿಷ್ಯದಲ್ಲಿ ಗುರು ಪುಷ್ಯ ನಕ್ಷತ್ರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ರಾಶಿಯ ಅಧಿದೇವತೆ ಗುರು ಮತ್ತು ಇದರ ಅಧಿಪತಿ ಶನಿ
ಧಾರ್ಮಿಕ ಗ್ರಂಥಗಳ ಪ್ರಕಾರ, ಗುರು ಗ್ರಹವು ಮಂಗಳಕರ, ಜ್ಞಾನ ಮತ್ತು ಬುದ್ದಿವಂತಿಕೆಯ ಸಂಕೇತವೆಂದು ಹೇಳಲಾಗುತ್ತದೆ
ಶನಿ ಗ್ರಹವು ಸ್ಥಿರತೆಯನ್ನು ನೀಡುತ್ತೆ. ಇಂತಹ ಪರಿಸ್ಥಿತಿಯಲ್ಲಿ ಗುರು ಪುಷ್ಯ ನಕ್ಷತ್ರದ ಸಂಯೋಜನೆಯು ಶುಭ ಫಲಗಳನ್ನು ನೀಡುತ್ತೆ
ಗುರು ಪುಷ್ಯ ನಕ್ಷತ್ರವು ಶನಿಯ ಅಧಿಪತ್ಯವನ್ನು ಹೊಂದಿದೆ. ಆದರೆ ಅದರ ಸ್ವಭಾವವು ಗುರುವಿನಂತೆಯೇ ಇರುತ್ತದೆ. ಈ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳ ರಾಜ ಎಂದು ಕರೆಯಲಾಗುತ್ತೆ
ಗುರು ಪುಷ್ಯ ನಕ್ಷತ್ರದ ದಿನ ಏನನ್ನೂ ಖರೀದಿಸಿದರೆ ಒಳ್ಳೆಯದು, ಈ ನಕ್ಷತ್ರದ ದಿನ ಖರೀದಿಸಿದ ವಸ್ತುಗಳು ಶಾಶ್ವತವಾಗಿರುತ್ತವೆ ಮತ್ತು ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ
ಗುರು ಪುಷ್ಯ ನಕ್ಷತ್ರವು ಆರೋಗ್ಯದ ದೃಷ್ಟಿಯಿಂದ ವಿಶೇಷವಾಗಿದೆ. ಈ ರಾಶಿಯಲ್ಲಿ ಶುಭ ಗ್ರಹಗಳ ಪ್ರಭಾವದಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ
ಧಾರ್ಮಿಕ ತಜ್ಞರ ಪ್ರಕಾರ, ಪುಷ್ಯ ನಕ್ಷತ್ರದ ಸಮಯದಲ್ಲಿ ಆಭರಣ, ಆಸ್ತಿ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಹನಗಳನ್ನು ಖರೀದಿಸುವುದು ಶುಭಕರವಾಗಿದೆ. ಈ ಯೋಗದಲ್ಲಿ ನೀವು ಕೆಲಸವನ್ನ ಪ್ರಾರಂಭಿಸಬಹುದು
ಕಾರ್ತಿಕ ಮಾಸದಲ್ಲಿ ಗುರು ಪುಷ್ಯ ನಕ್ಷತ್ರದ ಯೋಗವು ಅಕ್ಟೋಬರ್ 24ರ ಗುರುವಾರ ದೀಪಾವಳಿಯ 7 ದಿನಗಳ ಮುನ್ನ ರೂಪುಗೊಳ್ಳುತ್ತಿದೆ. ಪಂಚಾಂಗದ ಪ್ರಕಾರ, ಈ ನಕ್ಷತ್ರವು ಗುರುವಾರ ಬೆಳಗ್ಗೆ 11.45ಕ್ಕೆ ಪ್ರಾರಂಭವಾಗುತ್ತೆ
ಗುರು ಪುಷ್ಯ ನಕ್ಷತ್ರ ಯೋಗವು 2024ರ ಅಕ್ಟೋಬರ್ 25ರ ಶುಕ್ರವಾರ ಮಧ್ಯಾಹ್ನ 12.31 ರ ಸುಮಾರಿಗೆ ಕೊನೆಗೊಳ್ಳುತ್ತೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ