ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣಗಳಿವು, ಮಳೆಗಾಲದಲ್ಲಿ ಇದೇ ಸ್ವರ್ಗ
By Reshma Jul 18, 2024
Hindustan Times Kannada
ಭಾರತದ 5 ಪ್ರಸಿದ್ಧ ಪ್ರವಾಸಿ ತಾಣಗಳ ಪೈಕಿ ಕರ್ನಾಟಕವು ಒಂದು. ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿದೆ.
ಮಂತ್ರಮುಗ್ಧಗೊಳಿಸುವ ಪ್ರಾಕೃತಿಕ ಸೌಂದರ್ಯದಿಂದ ಹಿಡಿದು ಕಡಲ ತೀರಗಳು, ಜಲಪಾತಗಳು, ಬೆಟ್ಟ-ಗುಡ್ಡಗಳು, ವೈವಿಧ್ಯಮಯ ಆಹಾರ ಸಂಸ್ಕೃತಿ ಹೀಗೆ ಕರ್ನಾಟಕದಲ್ಲಿ ಇರುವುದು ಒಂದಲ್ಲ ಎರಡಲ್ಲ.
ಕರ್ನಾಟಕದಲ್ಲಿ ನೋಡಲು ಯಾವುದೆಲ್ಲಾ ಬೆಸ್ಟ್ ಪ್ಲೇಸ್‌ಗಳಿವೆ ಎಂದು ಕೇಳುವವರಿಗೆ ನೀವು ಈ ಜಾಗಗಳನ್ನು ಖಂಡಿತ ರೆಕಮಂಡ್ ಮಾಡಬಹುದು.
ಮಡಿಕೇರಿ: ನೀವು ಮಾನ್ಸೂನ್ ಪ್ರವಾಸಕ್ಕೆ ತೆರಳುವ ಯೋಜನೆ ಹಾಕಿಕೊಂಡಿದ್ದರೆ ಮಡಿಕೇರಿಗಿಂತ ಬೆಸ್ಟ್ ಇನ್ನೊಂದಿಲ್ಲ. ಕರ್ನಾಟಕ ಸ್ಕ್ವಾಟ್‌ಲೆಂಡ್ ಎಂದು ಇದನ್ನು ಕರೆಯುತ್ತಾರೆ.
ಪ್ರಕೃತಿ ಪ್ರಿಯರಿಗೆ ಮಡಿಕೇರಿ ಸ್ವರ್ಗವಿದ್ದಂತೆ. ಏಕೆಂದರೆ ಮಳೆಗಾಲದಲ್ಲಿ ಇಲ್ಲಿ ಪ್ರಕೃತಿ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ.
ಟೀ ಎಸ್ಟೇಟ್‌ಗಳು, ಹಚ್ಚ ಹಸಿರ ಬೆಟ್ಟಗಳು, ಸುತ್ತಲೂ ಹರಿಯುವ ನದಿಗಳು, ಅಬ್ಬೆ ಜಲಪಾತ, ಮಾಂದಲಪಟ್ಟಿ ವ್ಯೂ ಪಾಯಿಂಟ್, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಂತಹ ಪ್ರದೇಶಗಳಿಗೆ ಭೇಟಿ ನೀಡಬಹುದು.
ನಂದಿಬೆಟ್ಟ: ಕರ್ನಾಟಕದ ನಂದಿಬೆಟ್ಟ ಪ್ರವಾಸಿಗರ ಸ್ವರ್ಗ ಎನ್ನುವುದು ಸುಳ್ಳಲ್ಲ. ಸೂರ್ಯೋದಯ ಮತ್ತು ಸೂರ್ಯಾಸ್ತದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಭೇಟಿ ನೀಡಬೇಕು.
ಇಲ್ಲಿನ ಸೂರ್ಯಾಸ್ತ, ಸೂರ್ಯೋದಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಬರುತ್ತದೆ. ಮಳೆಗಾಲದಲ್ಲಿ ನಂದಿಬೆಟ್ಟ ನೋಡುವುದೇ ಅಂದ.
ಚಿಕ್ಕಮಗಳೂರು: ಮಡಿಕೇರಿಯಂತೆ ಚಿಕ್ಕಮಗಳೂರು ಕೂಡ ಮಳೆಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ್ದು. ಮಳೆಗಾಲದಲ್ಲಿ ಚಿಕ್ಕಮಗಳೂರಿನ ಸೌಂದರ್ಯವನ್ನು ಸವಿಯಲು ಎರಡು ಕಣ್ಣುಗಳು ಸಾಲದು.
ಇಲ್ಲಿನ ಬೆಟ್ಟ-ಗುಡ್ಡಗಳು, ಜಲಪಾತ, ಹಸಿರ ಪ್ರಕೃತಿ, ಟೀ ಎಸ್ಟೇಟ್, ನದಿ ತೊರೆಗಳನ್ನು ಕಣ್ತುಂಬಿಕೊಳ್ಳಲು ಮಾನ್ಸೂನ್ ಋತುವಿನಲ್ಲಿ ತಪ್ಪದೇ ಭೇಟಿ ನೀಡಬೇಕು.