ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Bangalore News ಬೆಂಗಳೂರು ಆಟೋರಿಕ್ಷಾ ಚಾಲಕನ ವರ್ತನೆ ವಿರುದ್ದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೇ ವಿವಾದದಲ್ಲಿ ಸಿಲುಕಿದ ಯುವತಿ ಬಿಡುಗಡೆ ಮಾಡಿರುವ ವಿಡಿಯೋ ಇನ್ನಷ್ಟು ವಿವಾದ ಸೃಷ್ಟಿಸಿದೆ. ಆಕೆ ಏನು ಮಾತನಾಡಿದ್ದಾಳೆ ಎನ್ನುವ ವಿಡಿಯೋ ನೋಡಿ.
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕೋವಿಡ್ ನಂತರದ ಕಾಲದಲ್ಲಿ ಭಾರತದಲ್ಲಿ ಹಲವು ಉದ್ಯಮಗಳು ಕುಸಿತ ಕಂಡಿವೆ. ಇದೀಗ ಬಹುತೇಕ ಎಲ್ಲವೂ ಒಂದು ಹಂತಕ್ಕೆ ಬಂದಿವೆ. ಇದರಲ್ಲಿ ರಿಯಲ್ ಎಸ್ಟೇಟ್ನಲ್ಲಿ ಲಾಭವು ಬಾನೆತ್ತರಕ್ಕೆ ಸಾಗಿದೆ. ಬೆಂಗಳೂರಿನಲ್ಲೂ ಭೂಮಿ ಬೆಲೆ ಹೆಚ್ಚುತ್ತಿದ್ದು, ವಾಸದ ಮನೆಗಳಿಗೆ ಬೇಡಿಕೆ ದುಪ್ಪಟ್ಟಾಗಿದೆ. (ವರದಿ: ಎಚ್.ಮಾರುತಿ)
ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಯ್ತು. ಅಭಿಮನ್ಯು ನೇತೃತ್ವದ ಎಲ್ಲಾ ಹದಿನಾಲ್ಕು ಆನೆಗಳಿಗೂ ವಿಶೇಷ ಪೂಜೆ ನಡೆಯಿತು. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ನಡೆಯಿತು.
Attractive Ganesha Idols; ಮೈಸೂರು ಕೂಡ ಗಣೇಶ ಹಬ್ಬದ ಸಂಭ್ರಮ ಸಡಗರದಲ್ಲಿದೆ. ಕಲಾವಿದರು ಗಣೇಶನ ವಿಗ್ರಹ ನಿರ್ಮಿಸುವಲ್ಲಿ ತಮ್ಮದೇ ಆದ ಕಲ್ಪನೆಗೆ ಇಂಬು ನೀಡಿದ್ದು, ಆಶಯ ಆಧಾರಿತ ಗಣೇಶ ಕಲಾಕೃತಿಗಳನ್ನು ರಚಿಸಿ ಗಮನಸೆಳೆದಿದ್ದಾರೆ. ಇಲ್ಲಿ ಮೈಸೂರಿನ ಕಲಾವಿದ ರೇವಣ್ಣ, ಮೂರ್ತಿ ತಯಾರಕ ಮಂಜುನಾಥ್ ನಿರ್ಮಿಸಿದ ವಿಗ್ರಹ ಚಿತ್ರನೋಟವಿದೆ. (ವರದಿ- ರಂಗಸ್ವಾಮಿ, ಮೈಸೂರು)
BMTC Double-Decker Bus; ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಪ್ರಯಾಣದ ಗತ ವೈಭವ ಮರಳುವುದೇ ಎಂಬ ಬೆಂಗಳೂರಿಗರ ನಿರೀಕ್ಷೆ ಸದ್ಯಕ್ಕೆ ಈಡೇರುವ ಲಕ್ಷಣ ಇಲ್ಲ. ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು ಎಂಬುದರ ವಿವರ ಇಲ್ಲಿದೆ.
POCSO Case against Kolar teacher; ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪನ ಮೊಬೈಲ್ಗಳಲ್ಲಿ 5000ಕ್ಕೂ ಹೆಚ್ಚು ಹೆಣ್ಮಕ್ಕಳ ನಗ್ನಚಿತ್ರ, ನೂರಾರು ವಿಡಿಯೋ ಪತ್ತೆಯಾಗಿವೆ. ಹೀಗಾಗಿ ಈ ಕೃತ್ಯ ಅಕ್ಷಮ್ಯವಾಗಿದ್ದು, ಕೇಸ್ ರದ್ದಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
Traffic Chaos at Hebbal Flyover; ಬೆಂಗಳೂರಲ್ಲಿ ಸಂಚಾರ ದಟ್ಟಣೆ ಕುಖ್ಯಾತಿ ಇರುವಂತಹ ಪ್ರದೇಶಗಳಲ್ಲಿ ಒಂದು ಈ ಹೆಬ್ಬಾಳ ಫ್ಲೈ ಓಔರ್. ಇಲ್ಲಿ ಸಂಚಾರವೇ ಒಂದು ಸಾಹಸ. ಹೀಗಿರುವಾಗ ಸಹಜವಾಗಿಯೇ ವಿಐಪಿ ಸಂಚಾರ ಕಿರಿಕಿರಿ ಉಂಟುಮಾಡುತ್ತದೆ. ಇದು ಜನಾಕ್ರೋಶಕ್ಕೂ ಕಾರಣವಾಗಿದೆ.
Bengaluru News; ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ, ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ಇನ್ನೆರಡು ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್ಗಳು ತೆರೆದಿರುತ್ತವೆ ಎಂದು ಹೇಳಿದೆ.
Chitradurga Renukaswamy murder case; ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ದರ್ಶನ್ ನಿರ್ಧಾರ ಮಾಡಿದ್ದಾರೆ. ಹೀಗಾಗಿ ವಕಾಲತ್ತು ಅರ್ಜಿಗೆ ಸಹಿ ಹಾಕಿದ್ದು, ಜಾಮೀನು ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಸೋಮವಾರ (ಸೆ.9) ನ್ಯಾಯಾಂಗ ಬಂಧನದ ಅವಧಿ ಅಂತ್ಯವಾಗಲಿದೆ. (ವರದಿ - ಎಚ್. ಮಾರುತಿ, ಬೆಂಗಳೂರು)
Karnataka Weather September 7 2024; ಇಂದು ಗಣೇಶ ಹಬ್ಬ. ಕರ್ನಾಟಕದ ಉದ್ದಗಲಕ್ಕೂ ಗಣಪತಿ ಹಬ್ಬದ ಸಂಭ್ರಮ, ಸಡಗರದ ನಡುವೆ, ಬಹುತೇಕ ಕಡೆಗಳಲ್ಲಿ ಮಳೆಯಾಗಬಹುದು. ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಹವಾಮಾನ ಮುನ್ಸೂಚನೆ ವರದಿಯಲ್ಲಿ ಎಚ್ಚರಿಸಿದೆ.