Bigg Boss Kannada 11 Grand Finale LIVE Updates: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಮತ್ತು ರನ್ನರ್ ಅಪ್ ಯಾರೆಂದು ಸದ್ಯದಲ್ಲಿಯೇ ತಿಳಿಯಲಿದೆ. ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಪೈ, ರಜತ್, ಉಗ್ರಂ ಮಂಜು ದೊಡ್ಮನೆ ಕಣದಲ್ಲಿರುವ ಐದು ಫೈನಲಿಸ್ಟ್ಗಳಾಗಿದ್ದಾರೆ. ಈಗಾಗಲೇ ಕಾರ್ಯಕ್ರಮ ಆರಂಭವಾಗಿದೆ.
ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧದ ಎರಡು ದೌರ್ಜನ್ಯ ಪ್ರಕರಣಗಳನ್ನು ಇಟ್ಟುಕೊಂಡು ಮಹಿಳೆಯೊಬ್ಬರು ಆಟಗಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಮಯದಲ್ಲಿ ಈ ಘಟನೆ ನಡೆದಿದೆ.
ನಿಮ್ಮ ತಲೆಕೂದಲು ನಿರ್ವಹಣೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆಯೇ? ಬಾಳೆಹಣ್ಣು ಬಳಸಿಕೊಂಡು ನಿಮ್ಮ ಕೂದಲಿಗೆ ರೇಷ್ಮೆಯಂತಹ ನಯವಾದ ಟಚ್ ಕೊಡಬಹುದು. ಆಕರ್ಷಕ ತಲೆಕೂದಲು ನಿಮ್ಮದಾಗಿಸುವುದು ಹೇಗೆ?
ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಯಾನಿಕ್ ಸಿನರ್, ನೇರ ಸೆಟ್ಗಳಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಸತತ ಎರಡನೇ ಬಾರಿ ಪ್ರತಿಷ್ಠಿತ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
Anant Nag Top 10 Comedy Movies: ಅನಂತ್ ನಾಗ್ ವರ್ಸೈಟಲ್ ಅನಿಸಿಕೊಳ್ಳುವುದಕ್ಕೆ ಹಲವು ಚಿತ್ರಗಳು ಮತ್ತು ಪಾತ್ರಗಳು ಉದಾಹರಣೆಯಾಗಿ ಸಿಗುತ್ತವೆ. ಆ ಪೈಕಿ ದಿ ಬೆಸ್ಟ್ ಎನ್ನುವಂತಹ 10 ಚಿತ್ರಗಳನ್ನು ನೀವು ನೋಡಲೇಬೇಕು.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಅಷ್ಟೇ ಗ್ರ್ಯಾಂಡ್ ಆಗಿಯೇ ನಡೆಯುತ್ತಿದೆ. ಬಹುತೇಕರು ಈ ಸಲದ ವಿನ್ನರ್ ಹನುಮಂತು ಎಂದೇ ಹೇಳುತ್ತಿದ್ದಾರೆ. ಆ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಈಗ ಇದೇ ಸ್ಪರ್ಧಿಗಳಿಗೆ ಮತ್ತೊಂದು ಆಟ ಆಡಿಸಿದ್ದಾರೆ ಕಿಚ್ಚ. ಹಣ ತುಂಬಿದ ಸೂಟ್ಕೇಸ್ ಮುಂದಿಟ್ಟು, ಯಾರಿಗೆ ಹಣ ಬೇಕೋ ಅವರು ಇದನ್ನು ತೆಗೆದುಕೊಂಡು ಈಗಲೇ ಮೇನ್ ಡೋರ್ನಿಂದ ಹೊರಡಬಹುದು ಎಂದಿದ್ದಾರೆ.
Success Story: ಒಂದು ಕೋಟಿ ವೇತನದ ಉದ್ಯೋಗ ತ್ಯಜಿಸಿ 10 ಸಾವಿರಕ್ಕೆ ಜೀವನ ಸಾಗಿಸುತ್ತಿದ್ದ ವಿನೀತಾ ಸಿಂಗ್, ಇದೀಗ 4 ಸಾವಿರ ಕೋಟಿ ಸಾಮ್ರಾಜ್ಯ ನಿರ್ಮಿಸಿದ್ದಾರೆ. ಇವರು ಭಾರತದ ಪ್ರಮುಖ ಸೌಂದರ್ಯವರ್ಧಕ ಕಂಪನಿಯಾದ ಶುಗರ್ ಕಾಸ್ಮೆಟಿಕ್ಸ್ನ ಸಹ-ಸಂಸ್ಥಾಪಕಿ, ಸಿಇಒ.
Australian Open 2025: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಯುಎಸ್ನ ಮ್ಯಾಡಿಸನ್ ಕೀಸ್ ಗೆದ್ದು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಹಾಗಾದರೆ ಅವರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?
Jana Nayagan: ತಮಿಳು ನಟ ದಳಪತಿ ವಿಜಯ್ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಈ ಹಿಂದೆ ದಳಪತಿ 69 (Thalapathy 69) ಎಂಬ ಹೆಸರಿನಲ್ಲಿ ವಿಜಯ್ನ 69ನೇ ಸಿನಿಮಾವನ್ನು ಘೋಷಿಸಲಾಗಿತ್ತು. ಇದೀಗ ಈ ಸಿನಿಮಾದ ಹೆಸರು ಘೋಷಿಸಲಾಗಿದೆ. ಈ ಸಿನಿಮಾಕ್ಕೆ ಜನ ನಾಯಗನ್ ಎಂದು ಹೆಸರಿಡಲಾಗಿದೆ.
Bigg Boss Kannada 11: ಫಿನಾಲೆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಎಲ್ಲ ಸ್ಪರ್ಧಿಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಹನುಮಂತ ಉತ್ತರಿಸಿದ್ದಾರೆ. ಕೊನೆಯಲ್ಲಿ ಹಾಡಿನ ಮೂಲಕವೇ ರಜತ್ನಂತ ಮಗ ಇರಬಾರದು ಜಗಳ ಮಾಡಾಕ ಎಂದಿದ್ದಾರೆ.
ಕರ್ನಾಟಕ ಸರ್ಕಾರ ಹೊಸದಾಗಿ ಸೃಷ್ಟಿಸಿದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ನೇಮಕಗೊಂಡವರು ಒತ್ತಡದಿಂದ ಅಲ್ಲಿ ಉಳಿಯದೇ ಬೇರೆ ಇಲಾಖೆಗೆ ನಿಯೋಜನೆ ಮೇಲೆ ಹೋಗಿದ್ದಾರೆ. ಸರ್ಕಾರ ವಾಪಾಸಾಗಲು ಸುತ್ತೋಲೆ ಹೊರಡಿಸಿದೆ.
Padma Award: ಕರ್ನಾಟಕದ ಹಲವರಿಗೆ ಪದ್ಮ ಪ್ರಶಸ್ತಿ ಬಂದಿದೆ. ಯಕ್ಷಗಾನ ಕಲಾವಿದ ಗೋವಿಂದ ಭಟ್ಟರಿಗೂ ಪ್ರಶಸ್ತಿ ಬರಬೇಕಿತ್ತು ಎನ್ನುವ ಒತ್ತಾಸೆ ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳಿ ಬಂದಿದೆ.
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಅಮೃತಧಾರೆ ಧಾರಾವಾಹಿಯ ನಾಯಕಿ ಭೂಮಿಕಾ ಕಾಣಿಸಿಕೊಂಡಿದ್ದಾರೆ. ಪಾರುಗೆ ಅಣ್ಣಯ್ಯನ ಪ್ರೀತಿ ಬಗ್ಗೆ ಪಾಠ ಮಾಡಿದ್ದಾರೆ. ಪಾರು ಮನಸಿಗೆ ಈಗ ಸಮಾಧಾನ ಆದಂತಿದೆ.
ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.. ಗದಗದ ಲಕ್ಕುಂಡಿಯ ಶಿಲ್ಪ ಕಲೆ ವೈಭವವನ್ನು ಬಿಂಬಿಸುವ ಟ್ಯಾಬ್ಲೋವನ್ನು ಪ್ರದರ್ಶಿಸಲಾಗಿದ್ದು ಅತ್ಯುತ್ತಮವಾಗಿ ಮೂಡಿಬಂದಿದೆ. ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿಯನ್ನು ಅದರ ಅದ್ಭುತ ಕಲ್ಲಿನ ವಾಸ್ತುಶಿಲ್ಪಕ್ಕಾಗಿ 'ಶಿಲ್ಪಕಲೆಯ ತೊಟ್ಟಿಲು' ಎಂದು ಕರೆಯಲಾಗುತ್ತದೆ.