ಹಿಂದೂ ಧರ್ಮದಲ್ಲಿ ಜನರು ಹೆಚ್ಚು ಶಿವನನ್ನು ಆರಾಧಿಸುತ್ತಾರೆ, ಶಿವನಿಗೆ ಧೇವಾಧಿದೇವ ಎಂದೇ ಭಕ್ತರು ಕರೆಯುತ್ತಾರೆ.
ಶಿವನ ಒಲುಮೆಗೆ ಪಾತ್ರರಾಗಲು ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಆತನ ಪೂಜೆ ಮಾಡುತ್ತಾರೆ
ವಿಶೇಷವಾಗಿ ಸೋಮವಾರ ಶಿವನಿಗೆ ಮೀಸಲಾದ ದಿನವಾಗಿದೆ
ಸೋಮವಾರದ ವಿಶೇಷ ಪೂಜೆ ಶಿವನಿಗೆ ಪ್ರಿಯವಾದುದು, ಶಂಕರನನ್ನು ಮೆಚ್ಚಿಸಲು 5 ಸರಳ ಮಾರ್ಗಗಳು ಹೀಗಿವೆ
ಶಿವನಿಗೆ ಇಷ್ಟವಾದುದು ಬಿಲ್ವಪತ್ರೆ, ಜೊತೆಗೆ ವಿಭೂತಿ ಅರ್ಪಿಸಿದರೆ ಪ್ರಸನ್ನನಾಗುತ್ತಾನೆ
ಶಿವನಿಗೆ ಹಿಡಿ ಅಕ್ಕಿಯನ್ನು ಅರ್ಪಿಸಿದರೆ ಕೂಡಾ ಅವನು ಖುಷಿಯಾಗುತ್ತಾನೆ
ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ ಬೆಳಗ್ಗೆ, ಸಂಜೆ ತುಪ್ಪದ ದೀಪಗಳನ್ನು ಬೆಳಗಿಸಿ
ಒಂದು ಕಳಶ ನೀರನ್ನು ಅರ್ಪಿಸಿದರೆ ಕೂಡಾ ಶಿವನು ನಿಮ್ಮ ಭಕ್ತಿಗೆ ಮೆಚ್ಚಿ ವರ ನೀಡುತ್ತಾನೆ
ಸೋಮವಾರ, ಮಾಸ ಶಿವರಾತ್ರಿ, ಮಹಾ ಶಿವರಾತ್ರಿಯಂದು ಶಿವನ ಭಕ್ತರು ಉಪವಾಸವಿದ್ದು ಅವನನ್ನು ಪೂಜಿಸಿದರೆ ಭಕ್ತರಿಗೆ ಒಲಿಯುತ್ತಾನೆ
ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಕುರಿತು ತಿಳಿಯಬೇಕಾದ 10 ಆಸಕ್ತಿದಾಯಕ ಸಂಗತಿಗಳು