ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಕುರಿತು ತಿಳಿಯಬೇಕಾದ 10 ಆಸಕ್ತಿದಾಯಕ ಸಂಗತಿಗಳು
Wikimedia commons
By Reshma
Dec 23, 2024
Hindustan Times
Kannada
ಪ್ರತಿವರ್ಷ ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನ ಎಂದು ಆಚರಿಸಲಾಗುತ್ತದೆ
ಇದು ಪ್ರಪಂಚದಾದ್ಯಂತ ಖ್ಯಾತಿ ಪಡೆದ ಭಾರತದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ಸ್ಮರಿಸುವ ದಿನವಾಗಿದೆ
ಹಲವು ಗಣಿತ ತಜ್ಞರಿಗೆ ಸ್ಪೂರ್ತಿಯಾಗಿರುವ, ಶ್ರೀನಿವಾಸ ರಾಮಾನುಜನ್ ಅವರ ಕುರಿತು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ
ಶ್ರೀನಿವಾಸ ರಾಮಾನುಜನ್ ಅವರು 1887ರಲ್ಲಿ ತಮಿಳುನಾಡಿ ಈರೋಡ್‌ನಲ್ಲಿ ಜನಿಸುತ್ತಾರೆ, ಇವರ ತಂದೆ ಗುಮಾಸ್ತರಾಗಿದ್ದರು. ತಾಯಿ ಗೃಹಿಣಿ
Canva
ಕುಂಭಕೋಣಂನಲ್ಲಿ ಶ್ರೀನಿವಾಸ ರಾಮಾನುಜನ್ ಅವರು ಜನಿಸಿರುವ ಮನೆ ಇದ್ದು, ಈಗ ಅದನ್ನು ಶ್ರೀನಿವಾಸ ರಾಮಾನುಜನ್ ಅಂತರರಾಷ್ಟ್ರೀಯ ಸ್ಮಾರಕವಾಗಿ ನಿರ್ವಹಿಸಲಾಗುತ್ತಿದೆ
Canva
ಆ ಕಾಲದ ಅತ್ಯಂತ ಶ್ರೇಷ್ಠ ಗಣಿತಜ್ಞ ಎಂಬ ಖ್ಯಾತಿಗೆ ಪಾತ್ರರಾಗಿದ್ದರು ಶ್ರೀನಿವಾಸ ರಾಮಾನುಜನ್. ಆದರೆ ಇವರು ಗಣಿತ ವಿಷಯದಲ್ಲಿ ಯಾವುದೇ ತರಬೇತಿ ಪಡೆದಿರಲಿಲ್ಲ
Canva
ಇವರು ವಿಶ್ವದ ಪ್ರಸಿದ್ಧ ರಾಯಲ್ ಸೊಸೈಟಿಯ ಫೆಲೋ ಆಗಿ ಸೇರ್ಪಡೆಗೊಂಡ ಎರಡನೇ ಭಾರತೀಯರಾಗಿದ್ದರು
Canva
ಕುಟುಂಬದ ದೇವತೆಯಾದ ಮಹಾಲಕ್ಷ್ಮೀಯ ಅನುಯಾಯಿಯಾದ ಇವರು ತಮ್ಮ ಸಾಧನೆಗಳನ್ನು ಆಕೆಗೆ ಅರ್ಪಿಸಿದ್ದರು
Canva
ಕೇವಲ 32 ವರ್ಷ ಬದುಕಿದ್ದ ಅವರು 3900 ಗಣಿತ ಸಮೀಕರಣಗಳು, ಗುರುತುಗಳನ್ನು ಸಂಗ್ರಹಿಸಿದ್ದರು. ಪೈ ಇನ್ಫಿನಿಟಿ ಸರಣಿಯು ಇವರ ಅತ್ಯಂತ ಪ್ರಸಿದ್ಧ ಸಂಶೋಧನೆಗಳಲ್ಲಿ ಒಂದಾಗಿದೆ
Canva
ರಾಮಾನುಜನ್ ಅವರ ಜೀವನ ಕಥೆಯನ್ನು ಹೇಳಲು ಮೀಸಲಾದ ವಸ್ತುಸಂಗ್ರಹಾಲಯವೂ ಚೆನ್ನೈನಲ್ಲಿದೆ
Canva
ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವಾದ ಡಿಸೆಂಬರ್ 22 ಅನ್ನು ಪ್ರತಿ ವರ್ಷ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ
Canva
ವರದಿಗಳ ಪ್ರಕಾರ ರಾಮಾನುಜನ್ ಅವರು ತಮ್ಮ ಆಲೋಚನೆಗಳನ್ನು ನೋಟ್‌ಬುಕ್‌ಗಳಲ್ಲಿ ಹಸಿರು ಶಾಯಿಯಲ್ಲಿ ಬರೆಯುತ್ತಿದ್ದರು
Canva
ಇಂಡೋ-ಆಸೀಸ್ ಟೆಸ್ಟ್; MCGಯಲ್ಲಿ ಹೇಗಿದೆ ಭಾರತದ ಸಾಧನೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ