ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ 7 ನಾಯಕರು ಇವರೇ
By Prasanna Kumar P N
Jan 11, 2024
Hindustan Times
Kannada
ಆರ್‌ಸಿಬಿ ಮೊಟ್ಟಮೊದಲ ನಾಯಕ ರಾಹುಲ್ ದ್ರಾವಿಡ್. ಅವರು 2008ರಲ್ಲಿ 14 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಕೇವಲ 4ರಲ್ಲಿ ಗೆಲುವು ಸಾಧಿಸಿದ್ದರು.
ಕೆವಿನ್ ಪೀಟರ್ಸನ್ 2009ರಲ್ಲಿ ಆರ್‌ಸಿಬಿ ನಾಯಕರಾದರು. ಆದರೆ ಮುನ್ನಡೆಸಿದ್ದು ಕೇವಲ 6 ಪಂದ್ಯಗಳನ್ನು ಮಾತ್ರ. ನಂತರ ಕೆಳಗಿಳಿದರು.
2009ರಲ್ಲೇ ಪೀಟರ್ಸನ್ ಕೆಳಗಿಳಿದ ನಂತರ ಅನಿಲ್ ಕುಂಬ್ಳೆ ಆರ್‌ಸಿಬಿ ನಾಯಕರಾದರು. ಈ ಸೀಸನ್ನಲ್ಲಿ ಆರ್‌ಸಿಬಿ ತಂಡವನ್ನು ಫೈನಲ್ವರೆಗೂ ಮುನ್ನಡೆಸಿದ್ದರು. 2010ರಲ್ಲೂ ನಾಯಕರಾಗಿದ್ದರು.
ಡೇನಿಯಲ್ ವೆಟ್ಟೋರಿ ಐಪಿಎಲ್ 2011 ರಿಂದ 2012ರ ಋತುಗಳಲ್ಲಿ ಆರ್ಸಿಬಿಗೆ ನಾಯಕರಾಗಿದ್ದರು. ತಂಡವನ್ನು 2ನೇ ಬಾರಿಗೆ (2011) ತಂಡವನ್ನು ಫೈನಲ್ಗೆ ಕೊಂಡೊಯ್ದ 2ನೇ ನಾಯಕ.
ವಿರಾಟ್ ಕೊಹ್ಲಿ ಐಪಿಎಲ್ 2013 ರಿಂದ 2021 ರವರೆಗೆ ಫ್ರಾಂಚೈಸಿಗೆ ನಾಯಕತ್ವ ವಹಿಸಿದ್ದರು. ಆರ್‌ಸಿಬಿ ಇತಿಹಾಸದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಾಯಕ.
ವಿರಾಟ್ ಕೊಹ್ಲಿ ಐಪಿಎಲ್ 2017ರಲ್ಲಿ ಭುಜದ ಗಾಯದಿಂದ ಹೊರಗುಳಿದಿದ್ದಾಗ ಶೇನ್ ವ್ಯಾಟ್ಸನ್ 3 ಪಂದ್ಯಗಳಿಗೆ ಆರ್‌ಸಿಬಿ ನಾಯಕರಾಗಿದ್ದರು.
ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ಪ್ರಸ್ತುತ ನಾಯಕ. ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ ಐಪಿಎಲ್ 2022ರಲ್ಲಿ ಅಧಿಕಾರಕ್ಕೆ ಬಂದರು.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ