ಭೂಮಿಯತ್ತ 84 ಅಡಿ ಗಾತ್ರದ ರಾಕ್ಷಸ ಕ್ಷುದ್ರಗ್ರಹ, ನಾಸಾದಿಂದ ಎಚ್ಚರಿಕೆ

By Praveen Chandra B
Dec 18, 2024

Hindustan Times
Kannada

2024 ಎಕ್ಸ್‌ಎಸ್‌3 ಎಂಬ ಕ್ಷುದ್ರಗ್ರಹವು ಇಂದು (ಡಿಸೆಂಬರ್‌ 18) ಭೂಮಿಯ ಸನಿಹಕ್ಕೆ ಆಗಮಿಸಲಿದೆ ಎಂದು ನಾಸಾ ಎಚ್ಚರಿಸಿದೆ.

ಆದರೆ, ಭೂಮಿಗೆ ಈ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ ಇಲ್ಲ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. 

ಈ ಕ್ಷುದ್ರಗ್ರಹವು ಗಂಟೆಗ 23,423 ಮೈಲು (ಗಂಟೆಗೆ 37,695.63 ಕಿಮೀ) ವೇಗದಲ್ಲಿ ಭೂಮಿಯತ್ತ ಧಾವಿಸಿ ಬರುತ್ತಿದೆ.

ಈ ಕ್ಷುದ್ರಗ್ರಹವು ಭೂಮಿಯ 2,080,000 ಮೈಲಿನಷ್ಟು ಸನಿಹಕ್ಕೆ ಬರಲಿದೆ. ಅಂದರೆ, ಭೂಮಿ ಮತ್ತು ಚಂದ್ರನ ನಡುವಿನ ಅಂತರದ 16 ಪಟ್ಟು ದೂರದಲ್ಲಿ ಹಾದು ಹೋಗಲಿದೆ.

ಕ್ಷುದ್ರಗ್ರಹಗಳ ವೇಗ ಮತ್ತು ಗಾತ್ರದ ಕಾರಣಗಳಿಂದ ದೂರಗಳು ಹಲವು ಲಕ್ಷ ಕಿಮೀ ಇದ್ದರೂ ಅದನ್ನು ಸಮೀಪವೆಂದೇ ಪರಿಗಣಿಸಲಾಗುತ್ತದೆ.

ಈ ಕ್ಷುದ್ರಗ್ರಹ ಹತ್ತಿರದಲ್ಲಿ ಆಗಮಿಸುವುದು ಖಗೋಳ ವಿಜ್ಞಾನಿಗಳಿಗೆ ಆಕಾಶ ಕಾಯದ ಅಧ್ಯಯನಕ್ಕೆ ನೆರವಾಗಲಿದೆ. ಪ್ರಾಚೀನ ಬಾಹ್ಯಾಕಾಶ ಶಿಲೆಯ ಕುರಿತು ಅಧ್ಯಯನಕ್ಕೆ ಕ್ಷುದ್ರಗ್ರಹಗಳು ನೆರವಾಗಲಿದೆ.

ಕ್ಷುದ್ರಗ್ರಹ ಎಂದರೇನು: ಕ್ಷುದ್ರಗ್ರಹಗಳು ಸೂರ್ಯನ ಸುತ್ತ ಸುತ್ತುವ ಸಣ್ಣ, ಕಲ್ಲಿನ ವಸ್ತುಗಳು. ಸುಮಾರು 4.6 ಶತಕೋಟಿ ವರ್ಷಗಳ ಹಿಂದೆ ನಮ್ಮ ಸೌರವ್ಯೂಹದ ಆರಂಭಿಕ ರಚನೆಯಿಂದ ಉಳಿದಿರುವ ಕಲ್ಲಿನ ಅವಶೇಷಗಳಾಗಿವೆ. ಇವು ಅಂತರಿಕ್ಷದಲ್ಲಿ ಸೂತ್ರವಿಲ್ಲದ ಗಾಳಿಪಟದಂತೆ ಸಾಗುತ್ತ ಇರುತ್ತವೆ.

ಇತ್ತೀಚೆಗೆ ಕ್ಷುದ್ರಗ್ರಹವೊಂದು ರಷ್ಯಾದ ಯಾಕುಟಿಯಾ ಮೇಲೆ ಅಪ್ಪಳಿಸಿತ್ತು. ಅದರ ಸಣ್ಣ ಗಾತ್ರ ಮತ್ತು ಬಿದ್ದ ಸ್ಥಳದ ಕಾರಣದಿಂದ ಯಾವುದೇ ತೊಂದರೆಯಾಗಿಲ್ಲ.

ಇಲ್ಲಿ ಬಳಸಿರುವ ಎಲ್ಲಾ ಚಿತ್ರಗಳು ಸಾಂದರ್ಭಿಕ ಚಿತ್ರಗಳಾಗಿವೆ.  ಚಿತ್ರಗಳ ಹಕ್ಕುಗಳನ್ನು pixabay ಹೊಂದಿದೆ. 

ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯರು

PTI