ಐಶ್ವರ್ಯಾ ಅರ್ಜುನ್ ಪ್ಯಾರಿಸ್ ಪ್ರಣಯ ಕಂಡು ಖುಷಿಗೊಂಡ ಕನ್ನಡಿಗರು
By Praveen Chandra B
Nov 05, 2024
Hindustan Times
Kannada
ಬಹುಭಾಷಾ ನಟ ಅರ್ಜುನ್ ಸರ್ಜಾರ ಪುತ್ರಿ ಐಶ್ವರ್ಯಾ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ.
ಈ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದ ಕ್ಯಾಪ್ಷನ್ ಕನ್ನಡಿಗರ ಹೃದಯ ಗೆದ್ದಿದೆ.
ಇವರು ಈ ಫೋಟೋಗಳಿಗೆ ಪ್ಯಾರಿಸ್ ಪ್ರಾಣಾಯ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದು ಪ್ರಣಯ ಆಗಬೇಕಿತ್ತು ಎಂದು ಕೆಲವರು ತಿದ್ದಿದ್ದಾರೆ.
ಹೀಗಿದ್ದರೂ, ತಮಿಳು ನಟಿಯ ಕನ್ನಡ ಪ್ರೀತಿಗೆ ಕನ್ನಡಿಗರು ಖುಷಿಗೊಂಡಿದ್ದಾರೆ. "ಏನಿದು ಅದ್ಭುತ, ವಾಹ್ ಕನ್ನಡ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಇವರು ಈ ವರ್ಷ ಜೂನ್ ತಿಂಗಳಲ್ಲಿ ತಮಿಳು ನಟ ಉಮಾಪತಿ ರಾಮಯ್ಯರನ್ನು ಮದುವೆಯಾಗಿದ್ದರು.
ತಮಿಳು ಸಿನಿಮಾಗಳಲ್ಲಿ ಉಮಾಪತಿ ಮತ್ತು ಐಶ್ವರ್ಯಾ ನಾಯಕ ಮತ್ತು ನಾಯಕಿಯಾಗಿ ನಟಿಸಿದ್ದಾರೆ.
ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ಮಂದಿರಂ ಪೊರುರ್‌ನಲ್ಲಿ ಇವರಿಬ್ಬರು ಶುಭವಿವಾಹವಾಗಿದ್ದರು.
ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ