ಹಬ್ಬದ ಅಡುಗೆ ತಿಂದು ತೂಕ ಹೆಚ್ಚಾಯ್ತ? ಈ ವ್ಯಾಯಾಮದಿಂದ ದೇಹದ ಕೊಬ್ಬು ಕರಗಿಸಿ
By Praveen Chandra B
Nov 05, 2024
Hindustan Times
Kannada
ದೀಪಾವಳಿ ಹಬ್ಬದೂಟ ಮಾಡಿ ಸಾಕಷ್ಟು ಜನರು ಸಂಭ್ರಮಿಸಿರಬಹುದು. ಹಬ್ಬ ಮುಗಿದ ಬಳಿಕ ದೇಹದ ತೂಕ ಹೆಚ್ಚಿರುವುದನ್ನು ನೋಡಿ ಚಿಂತೆ ಹೆಚ್ಚಾಗಿರಬಹುದು.
ಕೆಲವೊಂದು ವ್ಯಾಯಾಮಗಳು ತೂಕ ಇಳಿಕೆಗೆ ನೆರವಾಗುತ್ತದೆ. ಹಬ್ಬದ ಸಮಯದಲ್ಲಿ ಉಂಟಾದ ತೂಕ ಹೆಚ್ಚಳವನ್ನು ಕಡಿಮೆ ಮಾಡಿಕೊಳ್ಳಲು ಇವು ನೆರವಾಗುತ್ತವೆ.
ಸ್ಕಿಪ್ಪಿಂಗ್: ಫ್ಯಾಟ್ ಬರ್ನ್ ಮಾಡಲು, ದೇಹ ಸದೃಢಗೊಳಿಸಲು, ಶಕ್ತಿ ಹೆಚ್ಚಿಸಲು, ದೇಹದ ಆಕಾರ ಉತ್ತಮಗೊಳಿಸಲು, ಕಾಲಿನ ಸದೃಢತೆ ಹೆಚ್ಚಿಸಲು ಸ್ಕಿಪ್ಪಿಂಗ್ ನೆರವಾಗುತ್ತದೆ.
ಬಟ್ ಕಿಕ್ಸ್(butt kicks): ಇದು ಕೂಡ ಹಬ್ಬದ ಸಮಯದಲ್ಲಿ ಹೆಚ್ಚಾದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿ.
freepik.com
ಸ್ಕ್ವಾಟ್ಸ್: ಕುಳಿತು ಎದ್ದೇಳುವಂತಹ ಸ್ಕ್ವಾಟ್ಸ್ ವ್ಯಾಯಾಮ ಕೂಡ ತೂಕ ಇಳಿಕೆಗೆ ಸಹಕಾರಿ.
ಬುರ್ಪಿಸ್ (burpees): ಇದು ಕೂಡ ತೂಕ ಇಳಿಕೆಗೆ ಸಹಕಾರಿ. ಗೂಗಲ್‌ನಲ್ಲಿ burpees ವ್ಯಾಯಾಮ ಮಾಡುವುದು ಹೇಗೆಂದು ತಿಳಿದುಕೊಳ್ಳಿ.
lunges ವ್ಯಾಯಾಮ ಕೂಡ ತೂಕ ಇಳಿಕೆಗೆ ನೆರವು ನೀಡುತ್ತದೆ.
ಪ್ಲಾಂಕ್ ಕೂಡ ದೇಹದ ಸ್ನಾಯುಗಳ ಸದೃಢತೆಗೆ ಮತ್ತು ವೇಗವಾಗಿ ತೂಕ ಇಳಿಸಲು ನೆರವು ನೀಡುತ್ತದೆ.
ಮೌಂಟೇನ್ ಕ್ಲಿಂಬರ್ಸ್ ಎಂಬ ವ್ಯಾಯಾಮ ಕೂಡ ತೂಕ ಇಳಿಕೆಗೆ ನೆರವಾಗುತ್ತದೆ.
ಓಟ: ಹಬ್ಬದ ಸಂಭ್ರಮ ಮುಗಿದ ಬಳಿಕ ಸುಮ್ಮನೆ ಕುಳಿತುಕೊಳ್ಳಬೇಡಿ. ಕೆಲವು ಕಿಲೋಮೀಟರ್ ಓಡುವ ಮೂಲಕ ತೂಕ ಇಳಿಸಿಕೊಳ್ಳಿ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ