ರಷ್ಯಾದ ಯಾಕುಟಿಯಾ ಮೇಲೆ ಅಪ್ಪಳಿಸಿದ ಕ್ಷುದ್ರಗ್ರಹ

By Praveen Chandra B
Dec 04, 2024

Hindustan Times
Kannada

ಸುಮಾರು 70 ಸೆಂ.ಮೀ ವ್ಯಾಸವನ್ನು ಹೊಂದಿರುವ ಕ್ಷುದ್ರಗ್ರಹವು ಡಿಸೆಂಬರ್ 3, 2024 ರಂದು ರಷ್ಯಾದ ಯಾಕುಟಿಯಾ ಮೇಲೆ ಅಪ್ಪಳಿಸಿದೆ.  (ಇಲ್ಲಿ ಬಳಸಿರುವ ಎಲ್ಲಾ ಚಿತ್ರಗಳು ಸಾಂದರ್ಭಿಕ)

ಸುಮಾರು 12 ಗಂಟೆಗಳ ಮೊದಲು ಪತ್ತೆಯಾದ ಈ ಆಕಾಶಕಾಯವು ಬೆಂಕಿಯುಂಡೆಯಂತೆ ಕಾಣಿಸಿತ್ತು. 

ಈ ಕ್ಷುದ್ರಗ್ರಹವು 2022 WJ, 2023 CX1, ಮತ್ತು 2024 BX1ನಂತಹ ಈ ಹಿಂದೆ ಗುರುತಿಸಿರುವ ಕ್ಷುದ್ರಗ್ರಹವನ್ನು ಹೋಲುತ್ತದೆ. 

ಭೂಮಿಯತ್ತ ಧಾವಿಸಿ ಬರುತ್ತಿರುವ ಈ ಕ್ಷುದ್ರಗ್ರಹ ವಾತಾವರಣದಲ್ಲಿ ಅದ್ಭುತ ಬೆಳಕಿನ ಪ್ರದರ್ಶನ ಸೃಷ್ಟಿಸಿತ್ತು ಎಂದು ಅಲ್ಲಿಯ ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. 

ವಿವಿಧ ಜಾಗತಿಕ ವೀಕ್ಷಣಾಲಯಗಳ ಖಗೋಳಶಾಸ್ತ್ರಜ್ಞರು ಕ್ಷುದ್ರಗ್ರಹದ ಪ್ರಭಾವವನ್ನು ಹೆಚ್ಚು  ನಿಖರತೆಯೊಂದಿಗೆ ಯಶಸ್ವಿಯಾಗಿ ಊಹಿಸಿದ್ದಾರೆ. 

ಇದು ಭೂಮಿಗೆ ತಲುಪುವ ಸಮಯವನ್ನು +/- 10 ಸೆಕೆಂಡುಗಳ ಅಂತರದಲ್ಲಿ ನಿಖರವಾಗಿ ಅಂದಾಜಿಸಿದ್ದಾರೆ.

ಈ ಕ್ಷುದ್ರಗ್ರಹವು ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿದ್ದಂತೆ, ಬಹು ತುಣುಕುಗಳಾಗಿ ವಿಭಜನೆಯಾಗಿದೆ. 

ದೂರದ ಅರಣ್ಯ ಪ್ರದೇಶದಾದ್ಯಂತ ಸಣ್ಣ ಬಂಡೆಗಳ ತುಣುಕುಗಳು ಬಿದ್ದಿವೆ.

 ಅದೃಷ್ಟವಶಾತ್, ಆ ಕ್ಷುದ್ರಗ್ರಹದ ಗಾತ್ರ ಮತ್ತು ಬಿದ್ದ ಸ್ಥಳದಿಂದಾಗಿ, ಯಾವುದೇ ಗಾಯಗಳು ಅಥವಾ ಗಮನಾರ್ಹ ಹಾನಿ ವರದಿಯಾಗಿಲ್ಲ.

ಹೋಟೆಲ್‌ ರುಚಿಯ ಬಿರಿಯಾನಿ ಮನೆಯಲ್ಲಿ ಮಾಡ್ಬೇಕು ಅಂದ್ರೆ ಮಸಾಲೆ ಹೀಗೆ ತಯಾರಿಸಿ