ಹೋಟೆಲ್ ರುಚಿಯ ಬಿರಿಯಾನಿ ಮನೆಯಲ್ಲಿ ಮಾಡ್ಬೇಕು ಅಂದ್ರೆ ಮಸಾಲೆ ಹೀಗೆ ತಯಾರಿಸಿ
By Reshma
Dec 04, 2024
Hindustan Times
Kannada
ಬಿರಿಯಾನಿ ಹಲವರಿಗೆ ಫೇವರಿಟ್. ವೆಜ್ ಆಗಿರಲಿ, ನಾನ್‌ವೆಜ್ ಆಗಿರಲಿ ಬಿರಿಯಾನಿ ತಿನ್ನೋಕೆ ಸಖತ್ ಆಗಿರುತ್ತೆ
ಬಿರಿಯಾನಿ ರುಚಿ ಹೆಚ್ಚಿಸೋದು ಅದರ ಮಸಾಲ. ಮಸಾಲೆಯ ಕಾರಣದಿಂದ ರುಚಿಯೊಂದಿಗೆ ಘಮವು ಹೆಚ್ಚುತ್ತದೆ
ಬಿರಿಯಾನಿ ಪುಡಿ ಅಥವಾ ಬಿರಿಯಾನಿ ಮಸಾಲಾ ತಯಾರಿಸುವಾಗ ವಿವಿಧ ಬಗೆಯ ಮಸಾಲೆ ಪದಾರ್ಥಗಳನ್ನು ಸೇರಿಸಲಾಗುತ್ತದೆ
ನೀವು ಮನೆಯಲ್ಲಿ ಮಾಡಿದ ಬಿರಿಯಾನಿ ರೆಸ್ಟೋರೆಂಟ್ ತರಹದ ರುಚಿ ಬರಬೇಕು ಅಂದ್ರೆ ಈ ರೀತಿ ಮಸಾಲೆ ತಯಾರಿಸಿ
ಬಿರಿಯಾನಿ ಮಸಾಲೆ ಮಾಡಲು ಕೊತ್ತಂಬರಿ, ಸೋಂಪು, ಜೀರಿಗೆ, ಲವಂಗ, ಕಾಳುಮೆಣಸು, ನಕ್ಷತ್ರ ಮೊಗ್ಗು, ಚಕ್ಕೆ, ದಾಲ್ಚಿನ್ನಿ ಎಲೆ ಈ ಎಲ್ಲವೂ ಬೇಕು
ಜೊತೆಗೆ ಜಾಯಿಕಾಯಿ, ಒಣಮೆಣಸು, ಬ್ಯಾಡಗಿ ಮೆಣಸು ಕೂಡ ಬೇಕು
ಈ ಎಲ್ಲಾ ಮಸಾಲೆಯನ್ನು ಚೆನ್ನಾಗಿ ಪರಿಮಳ ಬರುವವರೆಗೂ ಹುರಿದುಕೊಳ್ಳಿ.
ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪುಡಿ ಮಾಡಿ. ಇದನ್ನು ಡಬ್ಬಿಯಲ್ಲಿ ಹಾಕಿ ಸಂಗ್ರಹಿಸಿ ಇಡಿ
ಬಿರಿಯಾನಿ ಮಾಡುವಾಗ ಈ ಮಸಾಲೆ ಸೇರಿಸಿ. ಆಗ ಮನೆಯಲ್ಲಿ ಮಾಡಿದ ಬಿರಿಯಾನಿ ಯಾವುದೇ ಹೋಟೆಲ್ ಬಿರಿಯಾನಿಗಿಂತ ರುಚಿಯಲ್ಲಿ ಕಡಿಮೆ ಇರುವುದಿಲ್ಲ
ಕರ್ನಾಟಕ ಅರಣ್ಯ ಇಲಾಖೆಯ ಅರ್ಜುನ ಆನೆ ಈಗಲೂ ನೆನಪು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ