ಸ್ವಪ್ನಶಾಸ್ತ್ರ: ಹಣ ಇದ್ದ ಪರ್ಸ್ ಕನಸಿಗೆ ಬಂದರೆ ಏನರ್ಥ; ಇದು ಶುಭ ಸಂಕೇತವೇ? 

By Jayaraj
Sep 10, 2024

Hindustan Times
Kannada

ಸ್ವಪ್ನಶಾಸ್ತ್ರದ ಪ್ರಕಾರ, ಕನಸುಗಳು ವಿಭಿನ್ನ ಜಗತ್ತನ್ನು ಹೊಂದಿವೆ. ಪ್ರತಿ ಕನಸುಗಳಿಗೂ ಅರ್ಥಗಳಿವೆ.

ಕೆಲವೊಂದು ಕನಸುಗಳು ನಮ್ಮ ಭವಿಷ್ಯದ ನಡೆಯಬಹುದಾದ ಘಟನೆಗಳ ಕುರಿತ ಸುಳಿವುಗಳಾಗಿವೆ.

ಹಾಗಿದ್ದರೆ, ಕನಸಿನಲ್ಲಿ ಹಣ ತುಂಬಿದ ಪರ್ಸ್ ನೋಡಿದರೆ ಅರ್ಥವೇನು ಎಂಬುದನ್ನು ನೋಡೋಣ.

ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಣ ಇರುವ ಪರ್ಸ್ ಕಂಡರೆ, ಅದು ನಿಮ್ಮ ನಿಜ ಜೀವನದಲ್ಲಿ ಸಂತೋಷದ ಸಂಕೇತವಾಗಿದೆ.

ಇಷ್ಟೇ ಅಲ್ಲದೆ, ಜೀವನದಲ್ಲಿ ಭದ್ರತೆ, ಉತ್ತಮ ಆರ್ಥಿಕ ಸ್ಥಿತಿ ಮತ್ತು ಸ್ವಾಭಿಮಾನದ ಸಂಕೇತವಾಗಿದೆ.

ಈ ಕನಸು ನಿಮ್ಮ ಜೀವನದಲ್ಲಿ ಉಳಿತಾಯವನ್ನು ಸೂಚಿಸುತ್ತದೆ. ಅಲ್ಲದೆ, ಜೀವನದಲ್ಲಿ ಆರ್ಥಿಕ ಭದ್ರತೆಯ ಸಂಕೇತವಾಗಿರಬಹುದು.

ಹಠಾತ್ ಆದಾಯ, ಉದ್ಯೋಗದಲ್ಲಿ ಲಾಭ, ವ್ಯವಹಾರದಲ್ಲಿ ಲಾಭ ಮುಂತಾದ ಯಶಸ್ಸಿನ ಸೂಚನೆಯೂ ಆಗಿರಬಹುದು.

ನೀವು ಯಾವುದೇ ವ್ಯವಹಾರ ಅಥವಾ ಹೂಡಿಕೆ ಮಾಡಿದ್ದರೆ, ಈ ಕನಸು ನಿಮ್ಮ ಹೂಡಿಕೆಯು ನಿಮಗೆ ಫಲಪ್ರದವಾಗಬಹುದು ಎಂಬುದರ ಸಂಕೇತವಾಗಿದೆ.

ನಿಮ್ಮ ಕನಸಿನಲ್ಲಿ ಪೂರ್ಣ ಪರ್ಸ್ ಕಂಡರೆ ಹೊಸ ಆರಂಭವನ್ನು ಸಂಕೇತಿಸುತ್ತದೆ.

ಬದುಕಿನಲ್ಲಿ ಬೇಸರವೇ ಆಗದೆ ಸದಾ ಖುಷಿಯಿಂದ ಇರಬೇಕು ಅಂದ್ರೆ ನೀವು ಮಾಡಬೇಕಾಗಿದ್ದಿಷ್ಟು