ಮ್ಯಾನುಯಲ್ ಗಿಯರ್: ಕಾರು ಚಾಲನೆಯಲ್ಲಿ ಯಾವಾಗ ಯಾವ ಗಿಯರ್ ಬಳಸಬೇಕು?
pixabay
By Praveen Chandra B Sep 12, 2024
Hindustan Times Kannada
ಮ್ಯಾನುಯಲ್ ಗಿಯರ್ ಕಾರುಗಳಲ್ಲಿ ಸಾಮಾನ್ಯವಾಗಿ ಐದು ಗಿಯರ್‌ಗಳು ಇರುತ್ತವೆ. ಮತ್ತೊಂದು ರಿವರ್ಸ್ ಇರುತ್ತದೆ.
pixabay
ಈ ಗಿಯರ್‌ಗಳನ್ನು ಯಾವಾಗ ಹೇಗೆ ಬಳಸಬೇಕು ಎಂದು ತಿಳಿಯೋಣ. ಹೊಸದಾಗಿ ಕಾರು ಕಲಿಯೋರಿಗೆ ಇದು ಪ್ರಯೋಜನಕ್ಕೆ ಬರಬಹುದು.
pixabay
ಫಸ್ಟ್ ಗಿಯರ್: ಫಸ್ಟ್ ಗಿಯರ್ ಅನ್ನು ನಿಂತಿರುವ ಕಾರನ್ನು ಮುಂದಕ್ಕೆ ಚಲಿಸಲು, ತುಂಬಾ ಎತ್ತರದ ಪ್ರದೇಶಗಳನ್ನು ಹತ್ತಲು, ವೇಗ ಕಡಿತಗೊಳಿಸಲು, ಸ್ಲೋ ಟ್ರಾಫಿಕ್‌ನಲ್ಲಿ ಬಳಕೆ ಮಾಡಲಾಗುತ್ತದೆ.
ಸೆಕೆಂಡ್ ಗಿಯರ್: ಮೊದಲ ಗಿಯರ್ ಬಳಿಕ ತುಸು ವೇಗ ಹೆಚ್ಚಿಸಿಕೊಂಡು ಕ್ಲಚ್ ಅದುಮಿ ಎರಡನೇ ಗಿಯರ್ ಹಾಕಬೇಕು. ಕಡಿದಾದ ತಿರುವುಗಳು ಇರುವಲ್ಲಿಯೂ ಈ ಗಿಯರ್‌ನಲ್ಲಿ ಸಾಗಬಹುದು.
pixabay
ಮೂರನೇ ಗಿಯರ್: ಸಾಮಾನ್ಯ ರಸ್ತೆಯಲ್ಲಿ ಕಡಿಮೆ ವೇಗದಲ್ಲಿ ಸಾಗುವಾಗ ಥರ್ಡ್ ಗಿಯರ್ ಸೂಕ್ತ. ಓವರ್‌ಟೇಕಿಂಗ್ ಸಂದರ್ಭದಲ್ಲೂ ಈ ಗಿಯರ್ ಹಾಕಿ. ಕಾರಿನ ವೇಗ 30-35 ಕಿ.ಮೀ. ಇದ್ದಾಗ ಥರ್ಡ್ ಗಿಯರ್ ಬಳಕೆ ಸೂಕ್ತವಾಗಿದೆ.
ನಾಲ್ಕನೇ ಗಿಯರ್: ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಸಾಗುವಾಗ ನಾಲ್ಕನೇ ಗಿಯರ್ ಹಾಕಿ. ಇದರಿಂದ ಇಂಧನ ದಕ್ಷತೆಯೂ ಉತ್ತಮವಾಗಿ ದೊರಕುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಟ್ರಾಫಿಕ್ ಕ್ಲಿಯರ್ ಇದ್ದಾಗ ಈ ಗಿಯರ್ ಬಳಸಬಹುದು.
pixabay
5ನೇ ಗಿಯರ್: ರಸ್ತೆಯಲ್ಲಿ ಯಾವುದೇ ಅಡೆತಡೆ ಇಲ್ಲವೆಂದರೆ ಐದನೇ ಗಿಯರ್‌ನಲ್ಲಿ ಗಂಟೆಗೆ 60-65 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹೋಗುವಾಗ ಬಳಸಬಹುದು. ಅಡೆತಡೆ ಹೆಚ್ಚಿಲ್ಲದೆ ಇದ್ದಲ್ಲಿ ಹೈವೇಯಲ್ಲಿ ಈ ಗಿಯರ್‌ನಲ್ಲಿ ಸಾಗಬೇಕು.
ಪೂರ್ಣ ಪ್ರಮಾಣದಲ್ಲಿ ಕ್ಲಚ್ ಅದುಮಿ ಗಿಯರ್ ಬದಲಾಯಿಸಬೇಕು. ಸರಿಯಾಗಿ ಗಿಯರ್ ಹಾಕಲು ತಿಳಿದರೆ ಮಾತ್ರ ಚಾಲನೆ ಸರಾಗ. ಇಲ್ಲವಾದರೆ ಗಿಯರ್‌ಬಾಕ್ಸ್‌ಗೂ ಹಾನಿಯಾಗುತ್ತದೆ.