ಟೈರ್‌ ಪಂಕ್ಚರ್‌ ಆಗೋದನ್ನು ತಪ್ಪಿಸಲು ಈ 6 ವಿಧಾನ ಅನುಸರಿಸಿ

Pixabay (all photos)

By Praveen Chandra B
Sep 10, 2024

Hindustan Times
Kannada

ರಸ್ತೆಯಲ್ಲಿ ಕಾರು ಅಥವಾ ಬೈಕ್‌ ಟೈರ್‌ ಪಂಕ್ಚರ್‌ ಆದ್ರೆ ಅಪಘಾತವಾಗಬಹುದು. ಪಂಕ್ಚರ್‌ ಆದ ವಿಷಯ ಗೊತ್ತಾದ ತಕ್ಷಣ ಭಯಪಡದೆ ಕಾರನ್ನು ನಿಯಂತ್ರಿಸಲು ಯತ್ನಿಸಿ.

ಪಂಕ್ಚರ್‌ ಆದ ವಾಹನವನ್ನು ತಕ್ಷಣ ರಸ್ತೆ ಪಕ್ಕದಲ್ಲಿ ಪಾರ್ಕ್‌ ಮಾಡಿ. ಪಂಕ್ಚರ್‌ ಆದ ಟೈರ್‌ನಲ್ಲಿಯೇ ಕಾರು ಅಥವಾ ಬೈಕ್‌ ಚಲಾಯಿಸಬೇಡಿ. ಇದರಿಂದ ರಿಮ್‌ ಬೆಂಡಾಗಿ ಹೆಚ್ಚು ನಷ್ಟವಾಗಬಹುದು.

ನಡು ರಸ್ತೆಯಲ್ಲಿ ಟೈರ್‌ ಪಂಕ್ಚರ್‌ ಆಗುವುದನ್ನು ತಪ್ಪಿಸಲು ಪ್ರಯತ್ನಿಸಿ. ಅದಕ್ಕಾಗಿ ಟೈರ್‌ ನಿರ್ವಹಣೆ ಸಮರ್ಪಕವಾಗಿರಲಿ.

ಪ್ರತಿದಿನ ಪ್ರಯಾಣಕ್ಕೆ ಮುನ್ನ ಟೈರ್‌ಗಳನ್ನು ಪರಿಶೀಲನೆ ನಡೆಸಿ. ಟೈರ್‌ ಸವೆದಿರುವುದೇ, ಟೈರ್‌ನಲ್ಲಿ ಗಾಯಗಳು ಇವೆಯೇ ಇತ್ಯಾದಿ ಪರಿಶೀಲನೆ ನಡೆಸಿ.

ರಸ್ತೆಯಲ್ಲಿ ಗಾಜು, ಕಲ್ಲುಗಳು ಇತ್ಯಾದಿಗಳು ಚೆಲ್ಲಾಪಿಲ್ಲಿಯಾಗಿರುವುದು ಕಣ್ಣಿಗೆ ಬಿದ್ದರೆ ಅದರ ಮೇಲೆ ವಾಹನ ಚಾಲನೆ ಮಾಡಬೇಡಿ.

ಕಾರಿಗೆ ಒಳ್ಳೆಯ ಗುಣಮಟ್ಟದ ಟೈರ್‌ ಬಳಸಿ. ಹೈವೇ ಅಥವಾ ಆಫ್‌ರೋಡಿಂಗ್‌ ಚಾಲನೆಗೆ ಸೂಕ್ತವಾದ ಟೈರ್‌ ಬಳಸಿ.

ಟೈರ್‌ಗೆ ಇಂತಿಷ್ಟು ಆಯಸ್ಸು ಎಂದಿರುತ್ತದೆ. ಟೈರ್‌ ಹಳೆಯದಾದಗ ಬದಲಾಯಿಸಲು ಮರೆಯಬೇಡಿ. 

ಕಡಿಮೆ ದರಕ್ಕೆ ದೊರಕುತ್ತದೆ ಎಂದು ಸೆಕೆಂಡ್‌ ಹ್ಯಾಂಡ್‌ ಟೈರ್‌ ಬಳಸಬೇಡಿ. ದೂರ ಪ್ರಯಾಣ ಸಮಯದಲ್ಲಿ ಆಗಾಗ ಟೈರ್‌ ಆರೋಗ್ಯ ಚೆಕ್‌ ಮಾಡುತ್ತ ಮುಂದುವರೆಯಿರಿ.

ಸಿರಿಧಾನ್ಯಗಳ ಚಪಾತಿ ಸೇವನೆಯಿಂದ ಸಿಗುವ 7 ಆರೋಗ್ಯ ಪ್ರಯೋಜನಗಳಿವು