ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಅಮೂಲ್ಯ 5 ಸಲಹೆಗಳು
By Praveen Chandra B Sep 16, 2024
Hindustan Times Kannada
ಈಗ ದೇಶದಲ್ಲಿ ಇ-ಸ್ಕೂಟರ್‌ಗಳನ್ನು ಖರೀದಿಸಲು ಜನರು ಆದ್ಯತೆ ನೀಡುತ್ತಿದ್ದಾರೆ. ಆಥೆರ್, ಓಲಾ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿವೆ.
ಪೆಟ್ರೊಲ್ ಸ್ಕೂಟರ್‌ಗೆ ಹೋಲಿಸಿದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಾಭದಾಯಕ ಅನ್ನುವುದು ನಿಜ. ಆದರೆ, ಖರೀದಿ ಸಮಯದಲ್ಲಿ ಎಚ್ಚರವಹಿಸದೆ ಇದ್ದರೆ ದೊಡ್ಡ ನಷ್ಟವನ್ನೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಉಂಟುಮಾಡಬಹುದು.
1. ಬ್ಯಾಟರಿ ಪರ್ಫಾಮೆನ್ಸ್: ಸ್ಕೂಟರ್‌ನಲ್ಲಿ ಬ್ಯಾಟರಿ ಅನ್ನೋದು ಪವರ್‌ಹೌಸ್. ಖರೀದಿಸಲು ಉದ್ದೇಶಿಸಿರುವ ಬ್ಯಾಟರಿ ಪರ್ಫಾಮೆನ್ಸ್ ಗಮನದಲ್ಲಿಟ್ಟುಕೊಳ್ಳಿ.
2. ರೇಂಜ್: ಒಂದು ಫುಲ್ ಚಾರ್ಜ್‌ಗೆ ಎಷ್ಟು ಕಿ.ಮೀ. ರೇಂಜ್ ನೀಡುತ್ತದೆ ಎನ್ನುವುದು ಮುಖ್ಯವಾಗುತ್ತದೆ. 100 ಕಿ.ಮೀ.ಗಿಂತ ಹೆಚ್ಚು ರೇಂಜ್ ಇರುವ ಸ್ಕೂಟರ್ ಖರೀದಿ ಉತ್ತಮ.
3. ವಿನ್ಯಾಸ ಮತ್ತು ಗುಣಮಟ್ಟ: ಈಗ ಇ ಸ್ಕೂಟರ್‌ಗಳು ಪೆಟ್ರೋಲ್ ಸ್ಕೂಟರ್‌ಗಳಂತೆ ಅಂದವಾಗಿ ಮತ್ತು ಉತ್ತಮ ಗುಣಮಟ್ಟದ ನಿರ್ಮಾಣದೊಂದಿಗೆ ಆಗಮಿಸುತ್ತವೆ. ರಸ್ತೆಯಲ್ಲಿ ಉತ್ತಮ ಗ್ರಿಪ್ ನೀಡುವಂತಹ ಗುಣಮಟ್ಟದ ಇ ಸ್ಕೂಟರ್ ಖರೀದಿಸಿ.
4. ದರ ಮತ್ತು ವಾರೆಂಟಿ: ಎಲೆಕ್ಟ್ರಿಕ್ ಸ್ಕೂಟರ್ ದರ ಎಷ್ಟಿದೆ? ಮೂರು ವರ್ಷ ಬಳಸಿದರೆ ಎಷ್ಟು ಉಳಿತಾಯವಾಗಲಿದೆ ಇತ್ಯಾದಿಗಳನ್ನು ಲೆಕ್ಕ ಹಾಕಿ. ಇದೇ ಸಮಯದಲ್ಲಿ ಸ್ಕೂಟರ್ ಕಂಪನಿ ನೀಡಿರುವ ವಾರೆಂಟಿ ಪರಿಶೀಲಿಸಿ.
5. ಬ್ರ್ಯಾಂಡ್ ಮೌಲ್ಯ: ಒಳ್ಳೆಯ ಬ್ರ್ಯಾಂಡ್‌ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವುದು ಉತ್ತಮ. ಈಗ ಚೀನಾದಿಂದ ಬ್ಯಾಟರಿ ಮತ್ತು ಇತರೆ ವಸ್ತುಗಳನ್ನು ತಂದು ಭಾರತದಲ್ಲಿ ಜೋಡಿಸಿ ಸ್ಕೂಟರ್ ಮಾರಾಟ ಮಾಡುವುದು ಹೆಚ್ಚಾಗಿದೆ. ಉತ್ತಮ ಬ್ರ್ಯಾಂಡ್‌ನ ಸ್ಕೂಟರ್ ಖರೀದಿಸಲು ಆದ್ಯತೆ ನೀಡಿ.