ಮನೆಯಲ್ಲಿ ಬಾಲ್ಕನಿಯಲ್ಲಿ ಗಾರ್ಡನ್ ನಿರ್ಮಿಸುವವರಿಗೆ 10 ಟಿಪ್ಸ್
unsplash
By Praveen Chandra B Nov 17, 2024
Hindustan Times Kannada
ಬಾಲ್ಕನಿ ಗಾರ್ಡನ್ ಹೇಗಿರಬೇಕೆಂದು ಪ್ಲ್ಯಾನಿಂಗ್ ಮಾಡಿ. ಅದಕ್ಕೆ ತಕ್ಕಂತೆ ಸೆಟಪ್ ಮಾಡಿ. ಬಳಿಕ ಸೂಕ್ತ ಕಂಟೈನರ್ ಖರೀದಿಸಿ. ಮಣ್ಣು ತುಂಬಿಸಿ ಗಿಡ ನೆಡಿ.
unsplash
ಗಾರ್ಡನ್‌ಗೆ ಬಳಸುವ ಕಂಟೈನರ್ ತೂಕವನ್ನು ಹೊರುವಷ್ಟು ಮನೆಯ ಸೀಲಿಂಗ್ ಗಟ್ಟಿಮುಟ್ಟಾಗಿದೆಯೇ ತಿಳಿದುಕೊಳ್ಳಿ. ಇಂತಹ ಕಂಟೈನರ್‌ಗಳಿಂದ ನೀರು ಸೋರಿಕೆಯಾಗಿ ಇತರರ ಮನೆಯ ಮೇಲೆ ಬೀಳದಂತೆ ನೋಡಿಕೊಳ್ಳಿ.
unsplash
ಯಾವ ಗಿಡಗಳಿಂದ ಯಾವೆಲ್ಲ ಪ್ರಯೋಜನಗಳು ಇವೆ, ಯಾವ ಗಿಡಗಳು ಔಷಧೀಯ ಗುಣಗಳನ್ನು ಹೊಂದಿವೆ ಇತ್ಯಾದಿಗಳನ್ನು ತಿಳಿದುಕೊಂಡು ಅಂತಹ ಅಗತ್ಯ ಗಿಡಗಳಿಗೆ ತುಸು ಜಾಗವನ್ನು ಬಾಲ್ಕನಿಯಲ್ಲಿ ನೀಡಿ.
unsplash
ಈ ಗಿಡಗಳನ್ನು ನೆಡಲು, ಬೆಳೆಸಲು ಏನೆಲ್ಲ ಪರಿಕರಗಳು, ವಸ್ತುಗಳು ಅವಶ್ಯ ಎನ್ನುವುದನ್ನೂ ಪರಿಗಣಿಸಿರಿ.
unsplash
ಮುಖ್ಯವಾಗಿ ಗಿಡಗಳಿಗೆ ನೀರಿನ ಪೂರೈಕೆ ಹೇಗೆ ಮಾಡುವುದು ಎನ್ನುವುದನ್ನು ಕಂಡುಕೊಳ್ಳಿ. ಗಿಡಗಳಿಗೆ ಸರಿಯಾಗಿ ಸೂರ್ಯನ ಬೆಳಕು ಬೀಳುವಂತೆ ಇದೆಯೇ ಪರಿಶೀಲಿಸಿ.
ಮನೆಯ ಬಾಲ್ಕನಿಯಲ್ಲಿ ಕಡಿಮೆ ಸ್ಥಳಾವಕಾಶವಿದ್ದರೆ ಲಂಬವಾದ ಗಾರ್ಡನ್ ಸಹ ಮಾಡಬಹುದು. ಲಂಬವಾದ ಗಾರ್ಡನ್‌ಗಾಗಿ ನೀವು ಹೆಚ್ಚುವರಿ ಟೇಬಲ್, ಏಣಿ, ಕಪಾಟ್‌ಗಳ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಬಹುದು.
ಬಾಲ್ಕನಿಯಲ್ಲಿ ತುಂಬಿತುಳುಕುವಂತೆ ಗಿಡಗಳು ಇರುವುದು ಬೇಡ. ಮಿತಿಗಿಂತ ಹೆಚ್ಚಿನ ಗಿಡಗಳು ಇದ್ದರೆ ಪ್ರತಿನಿತ್ಯ ನಿರ್ವಹಣೆ ಮಾಡುವುದು ಕಷ್ಟವಾಗಬಹುದು.
Enter text Here
ನೀವು ಹೊಸದಾಗಿ ಗಾರ್ಡನ್ ನಿರ್ಮಿಸಲು ಆರಂಭಿಸಿದ್ದರೆ, ಹೂತೋಟ ನಿರ್ವಹಣೆ ಕುರಿತು ಕಡಿಮೆ ಜ್ಞಾನವಿದ್ದರೆ ಕಡಿಮೆ ಸಂಖ್ಯೆಯ ಗಿಡಗಳೊಂದಿಗೆ ಬಾಲ್ಕನಿ ಗಾರ್ಡನ್ ಆರಂಭಿಸುವುದು ಒಳಿತು.
Enter text Here
ಗಿಡಗಳ ಕುರಿತು ಸರಿಯಾದ ಕಾಳಜಿ ವಹಿಸುವುದು ಅತ್ಯಂತ ಅಗತ್ಯ. ನೀವು ಗಿಡಗಳಿಗೆ ಎಷ್ಟು ಕಾಳಜಿ ತೋರುವಿರೋ ಗಿಡಗಳು ಅಷ್ಟು ಉತ್ತಮವಾಗಿ ಬೆಳೆಯುತ್ತವೆ.