ತ್ವಚೆಯ ಹೊಳಪಿಗೆ ಬಾಳೆಹಣ್ಣು-ಕಾಫಿ ಫೇಸ್‍ಮಾಸ್ಕ್

freepik

By Priyanka Gowda
Oct 02, 2024

Hindustan Times
Kannada

ಪ್ರತಿಯೊಬ್ಬರು ಸುಂದರ ತ್ವಚೆ ಪಡೆಯಲು ಬಯಸುತ್ತಾರೆ. ಇದಕ್ಕಾಗಿ ಏನೇನೋ ಪ್ರಯತ್ನಿಸುತ್ತಾರೆ. ತ್ವಚೆಯ ಹೊಳಪಿಗೆ ಬಾಳೆಹಣ್ಣು-ಕಾಫಿ ಫೇಸ್‌ಮಾಸ್ಕ್ ಬಳಸುವುದರಿಂದ ಪ್ರಯೋಜನ ಪಡೆಯಬಹುದು.

freepik

ಸುಂದರ ತ್ವಚೆ ಪಡೆಯಲು ದುಬಾರಿ ಉತ್ಪನ್ನಗಳ ಬದಲಿಗೆ ಮನೆಮದ್ದುಗಳು ಪರಿಣಾಮಕಾರಿಯಾಗಿರುತ್ತದೆ. ಬಾಳೆಹಣ್ಣು-ಕಾಫಿ ಫೇಸ್ ಪ್ಯಾಕ್ ಹಚ್ಚುವುದರಿಂದ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಬಹುದು.

freepik

ಈ ಫೇಸ್ ಮಾಸ್ಕ್ ತಯಾರಿಸಲು ಒಂದು ಹಣ್ಣಾದ ಬಾಳೆಹಣ್ಣು, ಅಲೋವೆರಾ ಜೆಲ್, ಜೇನುತುಪ್ಪ ಮತ್ತು ಕಾಫಿ ಪುಡಿಯನ್ನು ತೆಗೆದುಕೊಳ್ಳಿ.

freepik

ಮೊದಲಿಗೆ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದಕ್ಕೆ ಅಲೋವೆರಾ ಜೆಲ್, ಜೇನುತುಪ್ಪ ಮತ್ತು ಕಾಫಿ ಪುಡಿಯನ್ನು ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ.

freepik

ಇದು ತ್ವಚೆಯನ್ನು ಹೊಳೆಯುವಂತೆ ಮಾಡಲು, ಮೃದುವಾಗಿಸಲು ಮತ್ತು ಹೈಡ್ರೇಟ್ ಆಗಿರಲು ಸಹಾಯಕವಾಗಿದೆ. ಅಲ್ಲದೆ ಕಪ್ಪುಕಲೆಗಳು ದೂರವಾಗಲು ಕೂಡ ಉತ್ತಮವಾಗಿದೆ.

freepik

ವಿಷಯ ಸೂಚನೆ: ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಅನ್ವಯಿಸುವ ಮುನ್ನ ಪ್ಯಾಚ್ ಪರೀಕ್ಷೆಯನ್ನು ಮಾಡಬೇಕು. ಸೂಕ್ಷ್ಮ ಚರ್ಮದವರಾಗಿದ್ದರೆ ಅಥವಾ ಅಲರ್ಜಿಯಿದ್ದರೆ ಚರ್ಮದ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

freepik

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?