ಮೊಣಕಾಲಿನ ಕಪ್ಪು ಕಾಲಿನ ಅಂದಗೆಡಿಸಿದ್ಯಾ, ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು

By Reshma
Sep 26, 2024

Hindustan Times
Kannada

ಸಾಮಾನ್ಯವಾಗಿ ಬಹುತೇಕರ ಮೊಣಕಾಲು ಕಪ್ಪಾಗಿರುತ್ತದೆ. ಇದರಿಂದ ಕಾಲಿನ ಅಂದ ಕೆಡುತ್ತದೆ, ಮಾತ್ರವಲ್ಲ ಶಾರ್ಟ್ ಡ್ರೆಸ್ ಹಾಕುವ ಆಸೆಯೂ ನೆರವೇರುವುದಿಲ್ಲ 

ಮೊಣಕಾಲಿನ ವೇಳೆ ಸಂಗ್ರಹವಾದ ಕೊಳೆಯು ಹಾಗೆ ನಿರಂತರವಾಗಿದ್ದು ಕಪ್ಪಾಗಲು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ 

ಶಾರ್ಟ್ ಡ್ರೆಸ್ ಧರಿಸಲೇಬೇಕು ಎಂದುಕೊಂಡಾಗ ಮೊಣಕಾಲಿಗೆ ಪೌಂಡೇಶನ್ ಹಚ್ಚಿ ಬಿಳಿ ಮಾಡಿಕೊಳ್ಳಬೇಕಾಗಿದೆ, ಆದರೂ ಕೆಲವರ ಮೊಣಕಾಲು ಕಪ್ಪಾಗಿಯೇ ಇರುತ್ತಾರೆ 

ಹಲವು ಜನರು ಈ ಕಪ್ಪನ್ನು ಹೋಗಲಾಡಿಸಲು ದುಬಾರಿ ಕ್ರೀಮ್‌ಗಳನ್ನು ಆಶ್ರಯಿಸುತ್ತಾರೆ. ಆದರೆ ಅದರಿಂದಲೂ ಅಂತಹ ಪರಿಣಾಮ ಗೋಚರಿಸುವುದಿಲ್ಲ 

ಇದನ್ನು ಹೋಗಲಾಡಿಸಲು ಹಣ ಖರ್ಚು ಮಾಡುವ ಬದಲು ಮನೆಯಲ್ಲೇ ಇರುವ ಈ ವಸ್ತುಗಳನ್ನ ಬಳಸಿ. ಇದರಿಂದ ನಿಮಗೆ ಪರಿಹಾರ ಸಿಗುತ್ತದೆ 

ತೆಂಗಿನೆಣ್ಣೆಯಿಂದ ಮೊಣಕಾಲನ್ನು ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಮೊಣಕಾಲಿನಲ್ಲಿರುವ ಕೊಳೆಯನ್ನು ತೆಗೆದು ಹಾಕಿ ಮೈ ಬಣ್ಣ ಸುಧಾರಿಸಲು ಸಹಕಾರಿ. ಹಾಗಂತ ಒಂದೇ ಬಾರಿಗೆ ಕೊಳೆ ಹೋಗುವುದಿಲ್ಲ ನೆನಪಿರಲಿ 

ಮೊಣಕಾಲಿನ ಕಪ್ಪು ಹೋಗಲಾಡಿಸಲು ಮೊಸರಿನ ಸಹಾಯ ಪಡೆಯಬಹುದು. ಮೊಸರಿನಲ್ಲಿ ಲ್ಯಾಕ್ಟಿಕ್ ಅಂಶವು ಕಪ್ಪನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. 20 ನಿಮಿಷಗಳ ಕಾಲ ಮೊಸರು ಹಚ್ಚಿ ನಂತರ ತೊಳೆಯಿರಿ 

ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಮೊಣಕಾಲಿನ ಮೇಲ ಉಜ್ಜಿ, ಇದರಿಂದ ನಿಧಾನಕ್ಕೆ ಕಪ್ಪು ಬಣ್ಣ ಬದಲಾಗುತ್ತದೆ 

ಆಲೂಗೆಡ್ಡೆಯಲ್ಲಿರುವ ಪಿಷ್ಟವು ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಇದು ಮೈಬಣ್ಣ ಸುಧಾರಿಸಲು ಸಹಕಾರಿ. ಆಲೂಗೆಡ್ಡೆಯನ್ನು ಕತ್ತರಿಸಿ, ಪ್ರತಿದಿ 10 ನಿಮಿಷಗಳ ಕಾಲ ಮೊಣಕಾಲಿನ ಮೇಲೆ ಉಜ್ಜಿ

ಸೌತೆಕಾಯಿಯು ಚರ್ಮದ ಕಪ್ಪನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದನ್ನು ಕತ್ತರಿಸಿ ರಸವನ್ನು ಮೊಣಕಾಲಿಗೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ಚರ್ಮ ಬಣ್ಣ ಸುಧಾರಿಸುತ್ತದೆ 

ನಿರುದ್ಯೋಗಿ ಆಗಿದ್ರೂ ಪರ್ಸನಲ್‌ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ... 

Pixabay