ದಟ್ಟ ಕೂದಲು ಬೇಕೆನ್ನುವವರು ಲವಂಗದ ಎಣ್ಣೆಯ ಲಾಭ ತಿಳಿಬೇಕು

By Reshma
Apr 23, 2024

Hindustan Times
Kannada

ಹೆಣ್ಣುಮಕ್ಕಳು ಉದ್ದ ಹಾಗೂ ದಟ್ಟ ಕೂದಲು ಬಯಸುವುದು ಸಹಜ. ಆದರೆ ಇದನ್ನು ಎಲ್ಲರಿಂದಲೂ ನಿರ್ವಹಿಸಲು ಸಾಧ್ಯವಿಲ್ಲ. ರೇಷ್ಮೆಯಂತಹ ನಯವಾದ ಕೂದಲು ನಿಮ್ಮದಾಗಬೇಕು ಎಂದರೆ ನೀವು ಲವಂಗದ ಎಣ್ಣೆ ಬಳಸಬೇಕು. 

ಲವಂಗದ ಎಣ್ಣೆಯನ್ನು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್‌ ಹಾಗೂ ಮಿನರಲ್ಸ್‌ಗಳು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತವೆ. ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. 

ವಾರಕೊಮ್ಮೆಯಾದ್ರೂ ಲವಂಗ ಎಣ್ಣೆಯಿಂದ ನೆತ್ತಿಯನ್ನು ಮಸಾಜ್‌ ಮಾಡಬೇಕು. ಇದು ನೈಸರ್ಗಿಕವಾಗಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. 

ವಾರಕೊಮ್ಮೆ ರಾತ್ರಿ ಮಲಗುವ ಮುನ್ನ ಲವಂಗದ ಎಣ್ಣೆಯಿಂದ ಮಸಾಜ್‌ ಮಾಡಿಕೊಂಡು ಬೆಳಿಗ್ಗೆ ಸ್ನಾನ ಮಾಡಬಹುದು. ಇದರಿಂದ ಕೂದಲು ಹಾಗೂ ನೆತ್ತಿ ಎರಡೂ ತಾಜಾವಾಗಿರುತ್ತದೆ. 

ಇದು ಕೂದಲನ್ನು ಬುಡದಿಂದಲೇ ಹೈಡ್ರೇಟ್‌ ಮಾಡುತ್ತದೆ. ಮೊಸರಿನೊಂದಿಗೆ ಲವಂಗದ ಪುಡಿಯನ್ನು ಬೆರೆಸಿ ಹೇರ್‌ ಮಾಸ್ಕ್‌ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತಲೆಸ್ನಾನ ಮಾಡಿ. 

ತೆಂಗಿನೆಣ್ಣೆಗೆ ಲವಂಗ ಸೇರಿಸಿ ಇದನ್ನು ಉಗುರು ಬೆಚ್ಚಗಾಗಿಸಿ. ನಂತರ ಆ ಎಣ್ಣೆಯನ್ನು ನೆತ್ತಿಯ ಭಾಗಕ್ಕೆ ಹಚ್ಚಿ. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೂದಲಿನಲ್ಲಿ ಉಂಟಾಗುವ ವ್ಯತ್ಯಾಸವನ್ನು ನೀವು ಗಮನಿಸಬಹುದು. 

ಲವಂಗವು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನ ವೃದ್ಧಿಸುತ್ತದೆ. ಇದು ಕೂದಲಿನ ಬೆಳವಣಿಗೆಗೂ ಉತ್ತಮವಾಗಿರುವ ಕಾರಣ ಇದನ್ನು ಗಿಡಮೂಲಿಕೆ ಚಹಾಗಳೊಂದಿಗೆ ಬೆರೆಸಿ ಕುಡಿಯಬಹುದು. 

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?