ರೇಷ್ಮೆಯಂತೆ ನುಣುಪಾದ ಕೇಶರಾಶಿ ನಿಮ್ಮದಾಗಲು ಮನೆಯಲ್ಲೇ ತಯಾರಿಸಿದ ಈ ಹೇರ್‌ಮಾಸ್ಕ್‌ ಬಳಸಿ

By Reshma
May 22, 2024

Hindustan Times
Kannada

ಬೇಸಿಗೆಯಲ್ಲಿ ಮುಖದಂತೆ ಕೂದಲಿನ ಅಂದವೂ ಹಾಳಾಗಿರುತ್ತದೆ. ಇನ್ನಂತೂ ಮಳೆಗಾಲ, ಈ ಸಮಯದಲ್ಲಿ ಕೂದಲಿನ ಕಾಳಜಿ ಮಾಡುವುದು ಕೊಂಚ ಕಷ್ಟವೇ. ಹಾಗಾಗಿ ವಿಶೇಷ ಕಾಳಜಿ ಅವಶ್ಯ.

ಅಂತಹ ಸಂದರ್ಭದಲ್ಲಿ ಹೊರಗಡೆ ಸಿಗುವ ಸೌಂದರ್ಯ ವರ್ದಕಗಳಿಗಿಂತ ಮನೆಯಲ್ಲೇ ಸಿಗುವ ವಸ್ತುಗಳಿಂದ ಕೂದಲಿನ ಕಾಳಜಿ ಮಾಡಿಕೊಳ್ಳಬಹುದು. ಇದರಿಂದ ಹಾನಿಯೂ ಕಡಿಮೆ.

ಕೂದಲನ್ನು ಪೋಷಿಸಲು ಮೊಸರನ್ನ ಹಚ್ಚಬೇಕು. ಇದು ಕೂದಲನ್ನು ಬುಡದಿಂದ ತುದಿಯವರೆಗೆ ಆರೈಕೆ ಮಾಡುತ್ತದೆ. 

ಆದರೆ ಬರೀ ಮೊಸರು ಹಚ್ಚುವ ಬದಲು ಮೊಸರಿನ ಫೇಸ್‌ಪ್ಯಾಕ್‌ ಹಚ್ಚಿ. ಅದಕ್ಕೆ ನಿಮಗೆ ಅಕ್ಕಿನೀರು, ಆಲೋವೆರಾ ಜೆಲ್‌ ಹಾಗೂ ಜೇನುತುಪ್ಪದ ಅಗತ್ಯವಿರುತ್ತದೆ. 

ಒಂದು ಬಟ್ಟಲಿನಲ್ಲಿ ಮೊಸರು ಹಾಗೂ ಮೇಲೆ ಹೇಳಿದ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 

ನಂತರ ಇದನ್ನು ಕೂದಲಿಗೆ ಬುಡದಿಂದಲೇ ಹಚ್ಚಿ. ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಶಾಂಪೂ ಬಳಸಿ ತಲೆಸ್ನಾನ ಮಾಡಿ. 

ಸ್ನಾನ ಮಾಡಿ ಕೂದಲು ಒಣಗಿದ ನಂತರ ನಿಮ್ಮ ಕೂದಲು ರೇಷ್ಮೆಯಂತೆ ನಯವಾಗುವುದನ್ನು ನೀವು ಗಮನಿಸಬಹುದು. ಈ ಹೇರ್‌ಪ್ಯಾಕ್‌ ಕೂದಲಿನ ಬೆಳವಣಿಗೆಗೂ ಉತ್ತಮ. 

ಗಮನಿಸಿ: ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಬಗ್ಗೆ ನಿಖರ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. ನಿಮಗೆ ಯಾವುದೇ ರೀತಿ ಅಲರ್ಜಿ ಇದ್ದರೆ ಈ ಹೇರ್‌ಪ್ಯಾಕ್‌ ಬಳಸದೇ ಇರುವುದು ಉತ್ತಮ.

ಈ ರಾಶಿಯವರು ತಮ್ಮ ವರ್ತನೆಯಿಂದ ಎರಡು ಮುಖದ ವ್ಯಕ್ತಿಗಳಂತೆ ಕಾಣುತ್ತಾರೆ