ವಯಸ್ಸೇ ಆಗದ ಸ್ನಿಗ್ಧ ಸೌಂದರ್ಯ ನಿಮ್ಮದಾಗಬೇಕಾ, ಬೇವಿನಎಣ್ಣೆಯನ್ನು ಹೀಗೆ ಬಳಸಿ 

By Reshma
May 08, 2024

Hindustan Times
Kannada

ಚರ್ಮದ ಆರೋಗ್ಯಕ್ಕೆ ಬೇವಿನೆಣ್ಣೆ ತುಂಬಾ ಉಪಯುಕ್ತ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ವಯಸ್ಸೇ ಆಗದಂತೆ ಚರ್ಮ ಹೊಳೆಯುತ್ತಿರಬೇಕು ಅಂದ್ರೆ ಇದನ್ನು ಹೀಗೆ ಬಳಸಿ. 

ಬೇವಿನೆಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಅಕಾಲಿಕ ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ನಿವಾರಿಸಬಹುದು. ಅಷ್ಟೇ ಅಲ್ಲದೇ ಇದರಿಂದ ಹಲವು ಪ್ರಯೋಜನಗಳಿವೆ. 

ಮುಖದಲ್ಲಿ ಸುಕ್ಕು ಕಾಣಿಸಿಕೊಂಡು ವಯಸ್ಸಾದ ಲಕ್ಷಣಗಳು ಕಾಣಲು ಪ್ರಾರಂಭಿಸಿದರೆ ಬೇವಿನೆಣ್ಣೆ ಹಚ್ಚಲು ಆರಂಭಿಸಿ. ಇದು ಸುಕ್ಕನ್ನು ಕಡಿಮೆ ಮಾಡಿ ಚರ್ಮವನ್ನು ಬಿಗಿಗೊಳಿಸುತ್ತದೆ. 

ಬೇವಿನೆಣ್ಣೆಯಲ್ಲಿ ಆಂಟಿಆಕ್ಸಿಡೆಂಟ್‌ ಅಂಶವಿದ್ದು, ಇದು ಮೊಡವೆಯ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ. 

ಬೇವಿನೆಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮವು ಆಳವಾಗಿ ಶುದ್ಧವಾಗುತ್ತದೆ ಮತ್ತು ಇದು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಬೇವಿನೆಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದಲ್ಲಿ ತೇವಾಂಶ ಉಳಿಯುತ್ತದೆ. ಇದು ಚರ್ಮವು ಕಾಂತಿ ರಹಿತವಾಗಿ ಕಾಣುವುದನ್ನು ತಡೆಯುತ್ತದೆ. 

ಚರ್ಮದಲ್ಲಿ ಅಲರ್ಜಿ ಅಥವಾ ತುರಿಕೆ ಸಮಸ್ಯೆ ಇದ್ದರೆ ಬೇವಿನೆಣ್ಣೆಯನ್ನು ಹಚ್ಚುವುದರಿಂದ ನಿವಾರಣೆಯಾಗುತ್ತದೆ. 

ಪ್ರತಿದಿನ ರಾತ್ರಿ ಮಲಗುವ ಮುನ್ನ ಮುಖಕ್ಕೆ ಬೇವಿನೆಣ್ಣೆಯನ್ನು ಹಚ್ಚಿ ವೃತ್ತಾಕಾರವಾಗಿ ಮಸಾಜ್‌ ಮಾಡಿ. ಸುಮಾರು 15 ನಿಮಿಷಗಳ ಕಾಲ ಮಸಾಜ್‌ ಮಾಡಿ ರಾತ್ರಿಯಿಡಿ ಹಾಗೇ ಬಿಡಿ. 

ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಚರ್ಮ ತಾಜಾವಾಗಿರುತ್ತದೆ. 

ಬೇವಿನೆಣ್ಣೆಯನ್ನು ಮುಖಕ್ಕೆ ಹಚ್ಚುವ ಮೊದಲು ಪ್ಯಾಚ್‌ ಟೆಸ್ಟ್‌ ಮಾಡಿಸಿ. ಕೆಲವು ಉತ್ಪನ್ನಗಳು ಚರ್ಮದ ಅಲರ್ಜಿ ಉಂಟು ಮಾಡಬಹುದು. 

ಸೀರೆಯಲ್ಲಿ ಪುಟ್ಟ ಗೌರಿ ಮದುವೆ ನಟಿ ಸಾನ್ಯಾ ಅಯ್ಯರ್‌ ಸಖತ್‌ ಕ್ಯೂಟ್‌