ಮುಖದಲ್ಲಿ ಬ್ಲಾಕ್‍ಹೆಡ್ಸ್ ಆಗಿದ್ಯಾ, ಚಿಂತೆ ಬೇಡ: ಈ ಮನೆಮದ್ದು ಪ್ರಯತ್ನಿಸಿ
freepik
By Priyanka Gowda Sep 17, 2024
Hindustan Times Kannada
ಬ್ಲಾಕ್‍ಹೆಡ್ಸ್ ಅಂದರೆ ಕಪ್ಪುಚುಕ್ಕೆ ಮುಖದ ಅಲ್ಲಲ್ಲಿ ಕಂಡುಬರುವುದು ಸಾಮಾನ್ಯ. ಕಪ್ಪುಚುಕ್ಕೆಗಳನ್ನು ಹೋಗಲಾಡಿಸಲು ಇಲ್ಲಿದೆ ಆರು ಮನೆಮದ್ದುಗಳು. ಇವು ಬ್ಲಾಕ್‍ಹೆಡ್ಸ್ ತೆಗೆಯುವಲ್ಲಿ ಪರಿಣಾಮಕಾರಿಯಾಗಿದೆ.
freepik
ಅಡುಗೆ ಸೋಡಾ: ಒಂದು ಟೀ ಚಮಚ ಅಡುಗೆ ಸೋಡಾವನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಪೇಸ್ಟ್ ಮಾಡಿ. ಇದನ್ನು ಬ್ಲಾಕ್ ಹೆಡ್ಸ್ ಇರುವಲ್ಲಿ ಹಚ್ಚಿರಿ.
freepik
ಆಪಲ್ ಸೈಡರ್ ವಿನೆಗರ್: ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಮಿಶ್ರಣ ಮಾಡಿ, ಹತ್ತಿ ಉಂಡೆಯಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಬ್ಲಾಕ್‍ಹೆಡ್ಸ್ ತೆಗೆಯುವಲ್ಲಿ ಇದು ಪರಿಣಾಮಕಾರಿಯಾಗಿದೆ.
freepik
ಜೇನುತುಪ್ಪ-ದಾಲ್ಚಿನ್ನಿ: ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
freepik
ಸ್ಟೀಮ್: ಪಾತ್ರೆಯೊಂದರಲ್ಲಿ ನೀರನ್ನು ಚೆನ್ನಾಗಿ ಕುದಿಸಿ. ಟವೆಲ್‍ನಿಂದ ಮುಚ್ಚಿ ಮುಖವನ್ನು 10 ರಿಂದ 15 ನಿಮಿಷ ಕಾಲ ಸ್ಟೀಮ್ ತೆಗೆದುಕೊಳ್ಳಿ.
ಓಟ್ಮೀಲ್ ಮಾಸ್ಕ್: ಓಟ್ಮೀಲ್ ಅನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. 10 ರಿಂದ 15 ನಿಮಿಷ ಕಾಲ ಹಾಗೆಯೇ ಬಿಟ್ಟು ನಂತರ ಮುಖ ತೊಳೆಯಿರಿ.
freepik
ಗ್ರೀನ್ ಟೀ: ಒಂದು ಕಪ್ ಗ್ರೀನ್ ಟೀ ಅನ್ನು ಕುದಿಸಿ, ತಣ್ಣಗಾಗಲು ಬಿಡಿ. ಹತ್ತಿ ಉಂಡೆಯನ್ನು ಚಹಾದಲ್ಲಿ ಅದ್ದಿ, ಬ್ಲಾಕ್ ಹೆಡ್ಸ್ ಇರುವಲ್ಲಿ ಹಚ್ಚಿರಿ.
freepik
ವಿಶೇಷ ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಕೇವಲ ತಿಳುವಳಿಕೆಗಷ್ಟೆ ನೀಡಲಾಗಿದೆ. ಚರ್ಮದ ಏನೇ ತೊಂದರೆಯಿದ್ದರೂ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.