ಚರ್ಮದ ಕಾಂತಿ ಅರಳಿಸುವ ವಿಟಮಿನ್ ಸಿ ಸೀರಮ್ ಅನ್ನು ಮನೆಯಲ್ಲೇ ಹೀಗೆ ತಯಾರಿಸಿ 

By Reshma
Aug 25, 2024

Hindustan Times
Kannada

ಪ್ರತಿಯೊಬ್ಬರಿಗೂ ತಮ್ಮ ಚರ್ಮ ಕಾಂತಿಯುತವಾಗಿ ಹೊಳೆಯುತ್ತಿರಬೇಕು ಎನ್ನುವ ಆಸೆ ಇರುವುದು ಸಹಜ. ಅದಕ್ಕಾಗಿ ವಿವಿಧ ರೀತಿಯ ಸೌಂದರ್ಯವರ್ದಕಗಳನ್ನು ಬಳಸುತ್ತಾರೆ

ಚರ್ಮದ ಹೊಳಪು ಹೆಚ್ಚಿಸಲು ವಿಟಮಿನ್ ಸಿ ಹೊಂದಿರುವ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚು ತಿನ್ನಬೇಕು ಎನ್ನಲಾಗುತ್ತದೆ. ಇದರೊಂದಿಗೆ ಸೀರಮ್ ಬಳಕೆ ಕೂಡ ಉತ್ತಮ 

ವಿಟಮಿನ್ ಸಿ ಸೀರಮ್ ಚರ್ಮಕ್ಕೆ ತುಂಬಾ ಉತ್ತಮ. ಇದು ಮುಖದ ಗ್ಲೋ ಹೆಚ್ಚಿಸುವುದು ಮಾತ್ರವಲ್ಲ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ 

ಆದರೆ ಈ ಸೀರಮ್ ಅನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಮನೆಯಲ್ಲೇ ತಯಾರಿಸಬಹುದು. ಇದನ್ನು ತಯಾರಿಸುವುದು ಹಾಗೂ ಬಳಸುವುದು ಹೇಗೆ ನೋಡಿ 

ಇದನ್ನು ತಯಾರಿಸಲು ಕಾಲು ಕಪ್ ಆಲೊವೆರಾ ಜೆಲ್‌, ಅರ್ಧ ಚಮಚ ನಿಂಬೆರಸ, ಅರ್ಧ ಚಮಚ ವಿಟಮಿನ್ ಸಿ ಎಣ್ಣೆ ಹಾಗೂ 8 ಚಮಚ ಅರಿಸಿನ ಪುಡಿ ಬೇಕು 

ಆಲೊವೆರಾ ಜೆಲ್ ಅನ್ನು ಸ್ಪೇ ಬಾಟಲಿಗೆ ಹಾಕಿ ನಂತರ ಅದರಲ್ಲಿ ನಿಂಬೆರಸ, ವಿಟಮಿನ್ ಸಿ ಎಣ್ಣೆ ಹಾಗೂ ಅರಿಸಿನ ಸೇರಿಸಿ ಮಿಶ್ರಣ ಮಾಡಿ

ಈ ಎಲ್ಲವನ್ನೂ ಹಾಕಿದ  ನಂತರ ಬಾಟಲಿಯನ್ನು ಚೆನ್ನಾಗಿ ಅಲುಗಾಡಿಸಿ. ಈಗ ನಿಮ್ಮ ಮುಂದೆ ವಿಟಮಿನ್ ಸಿ ಸೀರಮ್ ಸಿದ್ಧವಾಗಲಿದೆ 

ಈ ಸೀರಮ್ ಅನ್ನು ನೀವು ಫ್ರಿಜ್‌ನಲ್ಲಿ ಇಡಬಹುದು. ಹೀಗೆ ಮಾಡುವುದರಿಂದ ಹಲವು ದಿನಗಳವರೆಗೆ ಸಂಗ್ರಹಿಸಿ ಇಡಬಹುದು 

ಪ್ರತಿರಾತ್ರಿ ಮಲಗುವ ಮುನ್ನ ಸೀರಮ್ ಅನ್ನು ಮುಖಕ್ಕೆ ಹಚ್ಚಿ. ಬೆಳಗೆದ್ದು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ 

ವಿಟಮಿನ್ ಸಿ ಸೀರಮ್ ತ್ವಚೆಗೆ ತೇವಾಂಶವನ್ನು ನೀಡುತ್ತದೆ. ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ 

ಬಿಳಿ ರವಿಕೆ, ಕಡುಗೆಂಪು ಸೀರೆಯಲ್ಲಿ ಕಂಡ ಸಂಗೀತಾ ಭಟ್