ತ್ವಚೆಯ ಅಂದ ಹೆಚ್ಚಲು ಕೆ–ಫೇಸ್‌ಮಾಸ್ಕ್‌ಗಿಂತ ಉತ್ತಮ ಬೇರೆಯಿಲ್ಲ, ಏನಿದರ ಗುಟ್ಟು ತಿಳಿಯಿರಿ

By Reshma
Sep 28, 2024

Hindustan Times
Kannada

ಕೊರಿಯನ್ನರ ಬ್ಯೂಟಿ ಟ್ರೆಂಡ್ ಇತ್ತೀಚೆಗೆ ಸಾಕಷ್ಟು ವೈರಲ್ ಆಗುತ್ತಿದೆ. ಗಾಜಿನಂತೆ ಹೊಳೆಯುವ ತ್ವಚೆಗಾಗಿ ಹಲವರು ಕೊರಿಯನ್ ಬ್ಯೂಟಿ ಸಲಹೆಗಳನ್ನು ಅನುಸರಿಸುತ್ತಾರೆ 

ಸಾಮಾಜಿಕ ಜಾಲತಾಣಗಳಲ್ಲೂ ಕೊರಿಯನ್ ಬ್ಯೂಟಿ ಟ್ರೆಂಡ್‌ಗಳು ಸದ್ದು ಮಾಡುತ್ತಿವೆ. ಬಗೆ ಬಗೆಯ ಫೇಸ್‌ಪ್ಯಾಕ್‌ಗಳ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ನೀವೂ ಗಮನಿಸಿರಬಹುದು

ಕೊರಿಯಾದವರು ತಮ್ಮ ಕೂದಲು ಹಾಗೂ ಚರ್ಮದ ಆರೈಕೆಗೆ ಅಕ್ಕಿಯನ್ನು ಹೆಚ್ಚು ಬಳಸುತ್ತಾರೆ, ಅಕ್ಕಿ ನೀರು, ಅಕ್ಕಿ ಹಿಟ್ಟಿನಲ್ಲಿ ಅವರ ಸೌಂದರ್ಯದ ಗುಟ್ಟು ಅಡಗಿದೆ. ಅಕ್ಕಿಹಿಟ್ಟಿನಿಂದ ತಯಾರಿಸಬಹುದಾದ ಫೇಸ್‌ಪ್ಯಾಕ್ ಅಂದ ಹೆಚ್ಚಲು ಸಹಕಾರಿ

ಎರಡು ಚಮಚ ಅಕ್ಕಿಹಿಟ್ಟು ತೆಗೆದುಕೊಂಡು ಅದಕ್ಕೆ ಆಲೊವೆರಾ ಜೆಲ್ ಸೇರಿಸಿ ದಪ್ಪ ಮಿಶ್ರಣ ತಯಾರಿಸಿ

ಈ ಪೇಸ್ಟ್ ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷ ಬಿಡಿ. ನಂತರ  ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ 

ಈ ಕೆ ಬ್ಯೂಟಿ ಫೇಸ್‌ಮಾಸ್ಕ್ ರಸಾಯನಿಕ ಮುಕ್ತವಾಗಿದೆ, ಆ ಕಾರಣ ಇದು ಚರ್ಮದ  ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ 

ಇದು ತ್ವಚೆಗೆ ಗಾಜಿನ ಹೊಳಪು ನೀಡುವುದು ಮಾತ್ರವಲ್ಲ ಟ್ಯಾನಿಂಗ್‌ನಿಂದ ಮುಕ್ತಿ ನೀಡುತ್ತದೆ. ಚರ್ಮವನ್ನು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ 

ಗಮನಿಸಿ: ಈ ಸುದ್ದಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ  

ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು