ಕಂಕುಳ ಕಪ್ಪಿಗೆ ಒಂದೇ ವಾರದಲ್ಲಿ ಗುಡ್‌ಬೈ ಹೇಳ್ಬೇಕಾ, ಈ ಮನೆಮದ್ದು ಟ್ರೈ ಮಾಡಿ

By Reshma
May 04, 2024

Hindustan Times
Kannada

ಸ್ಲೀವ್‌ಲೆಸ್‌ ಡ್ರೆಸ್‌ ಧರಿಸುವುದು ಹಲವರಿಗೆ ಇಷ್ಟ. ಆದರೆ ಕಂಕುಳ ಕಪ್ಪಿನಿಂದಾಗಿ ಈ ಇಷ್ಟ ಕಷ್ಟವಾಗಿ ಬಿಡುತ್ತದೆ. 

ಅತಿಯಾಗಿ ಬೆವರುವುದು, ನೈರ್ಮಲ್ಯದ ಕೊರತೆ, ಹೈಪರ್‌ ಪಿಂಗ್ಮಟೇಷನ್‌, ರೇಜರ್‌ ಬಳಕೆ, ನಿರ್ಜೀವ ಚರ್ಮದ ಕೋಶಗಳು ಸೇರಿದಂತೆ ಹಲವು ಕಾರಣಗಳಿಂದ ಕಂಕುಳ ಕೆಳಗೆ ಕಪ್ಪಾಗಿರುತ್ತದೆ. 

ಹಲವು ಹೆಣ್ಣುಮಕ್ಕಳು ಮಾತ್ರವಲ್ಲ, ಪುರುಷರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದ ಸ್ಲೀವ್‌ಲೆಸ್‌ ಬಟ್ಟೆ ಧರಿಸಿ ಅಂದವಾಗಿ ಕಾಣಬೇಕು ಎಂಬ ಅವರ ಆಸೆ ನೆರವೇರುವುದೇ ಇಲ್ಲ. 

ಅಂತಹವರು ಈ ಮನೆಮದ್ದುಗಳನ್ನು ಟ್ರೈ ಮಾಡಬಹುದು. ಸ್ಕಬ್‌ ರೂಪದಲ್ಲಿ ಬಳಸಬಹುದಾದ ಈ ಮನೆಮದ್ದುಗಳು ಕಂಕುಳ ಕಪ್ಪು ನಿವಾರಿಸಿ ಅಂದ ಹೆಚ್ಚುವಂತೆ ಮಾಡುತ್ತದೆ. 

ಅದಕ್ಕಾಗಿ ನಿಮಗೆ ತಾಜಾ ಆಲೂಗೆಡ್ಡೆ, ಕಾಫಿ ಪುಡಿ, ಅರಿಸಿನ, ಸಕ್ಕರೆ ಹಾಗೂ ನಿಂಬೆರಸ ಇವಿಷ್ಟೂ ಸಾಮಗ್ರಿಗಳು ಬೇಕು. 

ಆಲೂಗೆಡ್ಡೆ ರಸ ತೆಗೆದು ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಅದರಲ್ಲಿ ಬೆರೆಸಿ, ಕಪ್ಪಾಗಿರುವ ಕಂಕುಳ ಭಾಗಕ್ಕೆ ಚೆನ್ನಾಗಿ ಸ್ಕರ್ಬ್‌ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. 

ಕೊನೆಯಲ್ಲಿ ಟೋನರ್‌ ಹಚ್ಚಿ. ಇದು ಕಂಕುಳಿನ ಭಾಗಕ್ಕೆ ತಂಪು ನೀಡುತ್ತದೆ. ಅಂಡರ್‌ ಆರ್ಮ್‌ ತೇವಾಂಶದಿಂದ ಕೂಡಿರುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಬೇಕು. 

ಈ ಮನೆಮದ್ದಿನಿಂದ ಅಡ್ಡಪರಿಣಾಮಗಳು ಕಡಿಮೆಯಾದರೂ ಕೂಡ ಸೂಕ್ಷ್ಮ ಚರ್ಮದ ನಿಮ್ಮದಾಗಿದ್ದರೆ ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ. 

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್