ತುಟಿಯ ರಂಗು ಹೆಚ್ಚಿಸಿ, ಮೃದುವಾಗಿಸುತ್ತೆ ಈ ಲಿಪ್ ಸೀರಮ್, ಇದನ್ನ ಮನೆಯಲ್ಲೇ ತಯಾರಿಸಿ
By Reshma Sep 20, 2024
Hindustan Times Kannada
ತುಟಿಯ ಚರ್ಮವು ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ತುಟಿಯ ಬಗ್ಗೆ ನಾವು ಹೆಚ್ಚು ಕಾಳಜಿ ಮಾಡಬೇಕು
ಮುಖದ ಮೇಲೆ ಮಾತ್ರವಲ್ಲ, ತುಟಿಗಳ ಮೇಲೂ ಪಿಗ್ಮಂಟೇಶನ್ ಉಂಟಾಗಬಹುದು. ಇದರಿಂದ ತುಟಿ ಕಪ್ಪಾಗಲು ಆರಂಭವಾಗುತ್ತದೆ
ಹಾಗಿದ್ದಾಗ ಮೃದುವಾದ ಹಾಗೂ ಗುಲಾಬಿ ಬಣ್ಣದ ತುಟಿಯ ರಂಗು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಇದರ ಪರಿಹಾರಕ್ಕೆ ಸುಲಭ ಮಾರ್ಗ ಇಲ್ಲಿದೆ
ಇತ್ತೀಚಿನ ದಿನಗಳಲ್ಲಿ ಲಿಪ್ ಸ್ಕ್ರಬ್, ಲಿಪ್ ಸೀರಮ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಮನೆಯಲ್ಲೇ ಸುಲಭವಾಗಿ ಸೀರಮ್ ತಯಾರಿಸಬಹುದು. ಇದನ್ನು ತುಟಿ ಹಚ್ಚುವುದರಿಂದ ಶಾಶ್ವತ ಪರಿಹಾರ ಪಡೆಯಬಹುದು
ಈ ಸೀರಮ್ ತಯಾರಿಸಲು ಮೊದಲು ತುಪ್ಪ ಬೇಕು. ಅರ್ಧ ಚೀ ಚಮಚ ಅರಿಸಿನವನ್ನು ಅರ್ಧ ಬೌಲ್ ತುಪ್ಪದಲ್ಲಿ ಮಿಶ್ರಣ ಮಾಡಿ
ನಿಮ್ಮ ಲಿಪ್ ಸೀರಮ್ ಸಿದ್ಧವಾಗಿದೆ. ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ. ದಿನದಲ್ಲಿ ಒಮ್ಮೆ ಅಥವಾ ಎರಡು ಬಾರಿ ಈ ಲಿಪ್ ಸೀರಮ್ ಹಚ್ಚಬಹುದು
ತುಪ್ಪವು ತುಟಿಗಳನ್ನು ತೇವವಾಗಿಸುತ್ತದೆ, ಇದರಿಂದ ತುಟಿಗಳ ಸಮಸ್ಯೆ ದೂರವಾಗುತ್ತದೆ. ಹಾಗೆಯೇ ಅರಿಸಿನವು ತುಟಿಗಳ ಮೇಲಿನ ಪಿಗ್ಮಂಟೇಶನ್ ತೆಗೆದು ಹಾಕಲು ಸಹಾಯ ಮಾಡುತ್ತದೆ, ಅಲ್ಲದೇ ತುಟಿಯ ರಂಗು ಗುಲಾಬಿಯಾಗಿಯೇ ಉಳಿಯುತ್ತದೆ
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ