ಮೊಡವೆ ಗೊಡವೆ: ಬೇಸಿಗೆಯಲ್ಲಿ ನವಿರು ಕೆನ್ನೆ ಕಾಪಾಡುವ 4 ಸರಳ ಉಪಾಯ ಇಲ್ಲಿದೆ
By Reshma Apr 02, 2024
Hindustan Times Kannada
ಅತಿಯಾದ ಶಾಖ ಮತ್ತು ತೇವಾಂಶದ ಕಾರಣದಿಂದ ಬೇಸಿಗೆಯಲ್ಲಿ ಮೊಡವೆಗಳಾಗುವುದು ಸಹಜ. ಬಿಸಿಲಿನ ಕಾರಣ ಎಣ್ಣೆಯಂಶ, ಬೆವರಿನಿಂದ ಚರ್ಮದ ಉರಿಯೂತ ಉಂಟಾಗುತ್ತದೆ.
ಬೇಸಿಗೆಯಲ್ಲಿ ಮೂಡುವ ಮೊಡವೆ ನಿವಾರಣೆಗೆ ಇಲ್ಲಿದೆ 4 ಸುಲಭ ಉಪಾಯ.
ಆಗಾಗ ಮುಖ ತೊಳೆಯುತ್ತಿರಿ: ಮೊಡವೆಗಳಿಗೆ ಕಾರಣವಾಗುವ ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವವನ್ನು ತಡೆಗಟ್ಟಲು ಬೇಸಿಗೆಯಲ್ಲಿ ಆಗಾಗ ನಿಮ್ಮ ಮುಖ ತೊಳೆಯುವುದು ಮುಖ್ಯವಾಗುತ್ತದೆ. ಚರ್ಮ ಹೈಡ್ರೇಟ್ ಆಗಿರಲು ಮಾಯಿಶ್ಚರೈಸರ್ ಅಂಶ ಇರುವ ಫೇಶ್‌ವಾಶ್ ಬಳಸಿ.
ಟೋನರ್ ಬಳಕೆ: ಚರ್ಮ ಪಿಎಚ್ ಮಟ್ಟವನ್ನು ಸಮತೋಲನದಲ್ಲಿರಿಸಲು ಟೋನರ್ ಬಳಸಿ. ಟೋನರ್ ನಿಮ್ಮ ಚರ್ಮವನ್ನ ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ. ಮೊಡವೆಯಾಗುವುದು ಹಾಗೂ ಮೊಡವೆ ಒಡೆಯುವುದನ್ನು ತಪ್ಪಿಸುತ್ತದೆ.
ಸನ್‌ಸ್ಕ್ರೀನ್ ಬಳಕೆ: ಚರ್ಮ ಟ್ಯಾನ್ ಆಗುವುದನ್ನು ತಪ್ಪಿಸಲು ಬೇಸಿಗೆಯಲ್ಲಿ ಮುಖಕ್ಕೆ ಸನ್‌ಸ್ಕ್ರೀನ್ ಬಳಸುವುದು ಬಹಳ ಮುಖ್ಯ. ಮಾಲಿನ್ಯ ಹಾಗೂ ಯುವಿ ಕಿರಣಗಳಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಇದು ಬಹಳ ಅವಶ್ಯ.
ಸಾಕಷ್ಟು ನೀರು ಕುಡಿಯಿರಿ: ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವುದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಚರ್ಮದಲ್ಲಿ ತೇವಾಂಶವಿರಲು ಪ್ರತಿದಿನ ಕನಿಷ್ಠ 4 ಲೀಟರ್‌ನಷ್ಟು ನೀರು ಕುಡಿಯಬೇಕು.