ಬೇಸಿಗೆಯಲ್ಲಿ ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಇಷ್ಟೆಲ್ಲಾ ಲಾಭವಿದೆ
By Reshma May 02, 2024
Hindustan Times Kannada
ಬೇಸಿಗೆಯಲ್ಲಿ ತ್ವಚೆಯ ಆರೈಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಯಾಕೆಂದರೆ ಬಿಸಿಲುಗಾಲದಲ್ಲಿ ಸನ್‌ಟ್ಯಾನ್, ಮೊಡವೆ, ತುರಿಕೆ, ಚರ್ಮದ ಕಿರಿಕಿರಿ ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ.
ಹಾಗಂತ ಇದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕು ಎಂದೇನಿಲ್ಲ. ಮನೆಯಲ್ಲೇ ಐಸ್‌ಕ್ಯೂಬ್‌ನಿಂದ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಸುಮಾರು ಎರಡು ನಿಮಿಷಗಳ ಕಾಲ ಐಸ್‌ಕ್ಯೂಬ್‌ನಿಂದ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ. ನಂತರ ಶುಷ್ಕತೆಯನ್ನು ಹೋಗಲಾಡಿಸಲು ಮಾಯಿಶ್ಚರೈಸರ್ ಹಚ್ಚಿ.
ಐಸ್‌ವಾಟರ್ ಚಿಕಿತ್ಸೆಯನ್ನೂ ಮಾಡಿಕೊಳ್ಳಬಹುದು. ದೊಡ್ಡಪಾತ್ರೆಯಲ್ಲಿ ಕೋಲ್ಡ್ ನೀರು ತೆಗೆದುಕೊಂಡು ಅದರಲ್ಲಿ 4 ರಿಂದ 5 ಬಾರಿ ಮುಖವನ್ನು ಅದ್ದಿ.
ಎಣ್ಣೆಚರ್ಮದವರಿಗೆ ಬೇಸಿಗೆಯಲ್ಲಿ ಮೊಡವೆಯಂತಹ ಸಮಸ್ಯೆಗಳು ಕಾಡುವುದು ಹೆಚ್ಚು. ಇದಕ್ಕಾಗಿ ವಾರದಲ್ಲಿ 3 ರಿಂದ 4 ಬಾರಿ ಐಸ್ ಮಸಾಜ್ ಮಾಡಿಕೊಳ್ಳಬೇಕು.
ಹೆಚ್ಚು ಮೊಬೈಲ್ ಅಥವಾ ಕಂಪ್ಯೂಟರ್ ನೋಡುವುದರಿಂದ ಕಣ್ಣಿನ ಸುತ್ತಲೂ ಕಪ್ಪಾಗಿರುತ್ತದೆ. ಅದಕ್ಕಾಗಿ ನೀವು ಐಸ್ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಕಣ್ಣುಗಳಿಗೆ ವಿಶ್ರಾಂತಿ ದೊರೆಯುತ್ತದೆ.
ಐಸ್‌ಕ್ಯೂಬ್‌ನಿಂದ ಮಸಾಜ್ ಮಾಡಿಕೊಳ್ಳುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ. ಇದು ಒಳಗಿನಿಂದ ತ್ವಚೆಯ ಆರೋಗ್ಯವನ್ನು ಸುಧಾರಿಸುತ್ತದೆ. ಹೊಳಪು ಹೆಚ್ಚುವ ಜೊತೆಗೆ ಸೂಕ್ಷ್ಮ ರೇಖೆಗಳು ಕಡಿಮೆಯಾಗುತ್ತವೆ.
ಬೇಸಿಗೆಯಲ್ಲಿ ಮೇಕಪ್ ಹೆಚ್ಚು ಕಾಲ ಉಳಿಯಬೇಕು ಅಂತಿದ್ದರೆ ಮೇಕಪ್ ಮಾಡಿಕೊಳ್ಳುವ ಮುನ್ನ ಐಸ್‌ಕ್ಯೂಬ್‌ಗಳಿಂದ ಮಸಾಜ್ ಮಾಡಿಕೊಳ್ಳಿ.
ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.
ಅಮೆರಿಕ ನೂತನ ಅಧ್ಯಕ್ಷ ಟ್ರಂಪ್ಗೆ ಸಿಗುವ ವೇತನ, ಸೌಲಭ್ಯಗಳೇನು?