ಬೆಳಗ್ಗೆ ನಿದ್ದೆ, ಮಧ್ಯರಾತ್ರಿ ಜಿಮ್; ಇದು ಶಾರುಖ್ ಖಾನ್ ಲೈಫ್‌ಸ್ಟೈಲ್
By Jayaraj
Nov 13, 2024
Hindustan Times
Kannada
ಬಾಲಿವುಡ್ ನಟ ಶಾರುಖ್ ಖಾನ್‌ಗೆ ಈಗ 59 ವರ್ಷ. ಆದರೆ ನೋಡಲು ಈಗಲೂ 30ರ ಯುವಕರಂತೆ ಕಾಣುತ್ತಾರೆ.
ತಮ್ಮ ಫೀಟ್‌ನೆಸ್ ಕಡೆಗೆ ಈಗಲೂ ಗಮನ ಹರಿಸುವ ಶಾರುಖ್, ಆಹಾರ ಕ್ರಮದ ಬಗ್ಗೆ ಎಚ್ಚರ ವಹಿಸುತ್ತಾರೆ.
ಶಾರುಖ್ ಖಾನ್ ಬೆಳಗ್ಗೆ 5 ಗಂಟೆಗೆ ಮಲಗಿ ಸುಮಾರು 9 ಗಂಟೆಗೆ ಏಳುವುದಾಗಿ, 2024ರಲ್ಲಿ ದಿ ಗಾರ್ಡಿಯನ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಶಾರುಖ್ ಖಾನ್ ಮಧ್ಯರಾತ್ರಿ 2 ಗಂಟೆಗೆ ಸುಮಾರು ಅರ್ಧ ಗಂಟೆ ಕಾಲ ವರ್ಕ್ ಔಟ್ ಮಾಡುವುದಾಗಿ ಹೇಳಿದ್ದಾರೆ.
ಶಾರುಖ್ ಖಾನ್ ದಿನಕ್ಕೆ ಒಂದು ಬಾರಿ ಮಾತ್ರ ಊಟ ಸೇವಿಸುತ್ತಾರಂತೆ.
ಈ ಹಿಂದೆ 2016ರ ಸಂದರ್ಶನದಲ್ಲಿ, ತಾನು ಆಹಾರದಲ್ಲಿ ಮಾಂಸ, ಬೇಳೆಕಾಳು, ಮೊಟ್ಟೆಯ ಬಿಳಿಭಾಗ ಮತ್ತು ಗ್ರಿಲ್ಲ್‌ಡ್ ಚಿಕನ್ ಸೇವಿಸುವುದಾಗಿ ಹೇಳಿದ್ದರು.
ಶಾರುಖ್ ಅವರು ಯಾವಾಗಲೂ ಮನೆಯೂಟ ಇಷ್ಟಪಡುವುದಾಗಿ ಹೇಳಿದರು.
ಊಟದಲ್ಲಿ ಸಾಮಾನ್ಯವಾಗಿ ತಂದೂರಿ ಚಿಕನ್ ಅಥವಾ ಮೀನು, ಮೊಳಕೆ ಬರಿಸಿದ ಕಾಳುಗಳು ಅಥವಾ ತರಕಾರಿ ಇರುತ್ತಂತೆ.
ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ