ಬಿಳಿ ಬಣ್ಣದ ಸೀರೆಯಲ್ಲಿ 7ನೇ ಬಜೆಟ್‌ ಮಂಡಿಸಲಿರುವ ನಿರ್ಮಲಾ ಸೀತಾರಾಮನ್‌

ANI/Twitter

By Reshma
Jul 23, 2024

Hindustan Times
Kannada

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 7ನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದಾರೆ. ಪ್ರತಿ ಬಾರಿ ಬಜೆಟ್‌ ಮಂಡಿಸುವಾಗಲೂ ನಿರ್ಮಲಾ ಅವರು ಉಟ್ಟ ಸೀರೆ ಬಾರಿ ಗಮನಸೆಳೆಯುತ್ತದೆ.  

ಈ ಬಾರಿ ಬಜೆಟ್‌ ಮಂಡಿಸಲು ನಿರ್ಮಲಾ ಅವರು ಗುಲಾಬಿ ಅಂಚಿನ ಬಿಳಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. 

ANI/Twitter

ಈಗಾಗಲೇ ಹಣಕಾಸು ಸಚಿವಾಲಯಕ್ಕೆ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್‌ ಕಾರಿನಿಂದ ಇಳಿದು ಸಚಿವಾಲಯದ ಒಳಗೆ ಹೋಗುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ.

ANI/Twitter

ಕಳೆದ 6 ಬಜೆಟ್‌ಗಳಲ್ಲೂ ಸರಳ ಸೀರೆಯಲ್ಲಿ ಮಿಂಚಿದ್ದ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿಯೂ ಸರಳ ಅಲಂಕಾರದ ಮೂಲಕ ಗಮನ ಸೆಳೆದಿದ್ದಾರೆ. 

ANI/Twitter

ಮೋದಿ 3.0 ಸರ್ಕಾರ ಮೊದಲ ಬಜೆಟ್‌ ಇದಾಗಿದ್ದು ಬಜೆಟ್‌ ಮೇಲಿನ ನಿರೀಕ್ಷೆ ಹೆಚ್ಚಿದೆ. 

ಹಣಕಾಸು ಸಚಿವರು ತಮ್ಮ  7ನೇ ಬಜೆಟ್‌ನಲ್ಲಿ ಯಾವ ವಲಯಕ್ಕೆ ಏನೆಲ್ಲಾ ನೀಡಲಿದ್ದಾರೆ ಎಂಬುದನ್ನು ತಿಳಿಯಲು ಜನ ಕಾತರದಿಂದ ಕಾಯುತ್ತಿದ್ದಾರೆ. 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ