ಕಡಿಮೆ ಬಡ್ಡಿಗೆ ಗೃಹ ಸಾಲ ನೀಡುವ 5 ಬ್ಯಾಂಕ್​ಗಳು

By Prasanna Kumar P N
Aug 22, 2024

Hindustan Times
Kannada

1. ಹೆಚ್​ಡಿಎಫ್​ಸಿ ಬ್ಯಾಂಕ್: ವಸತಿ ಸಾಲದ ಮೇಲೆ ಬಡ್ಡಿದರ ವಾರ್ಷಿಕ ಶೇ 8.75 ರಿಂದ ಶೇ 9.65ರ ನಡುವೆ ಮತ್ತು ಸ್ಟಾಂಡರ್ಡ್ ರೇಟ್ ಶೇ 9.40 ಮತ್ತು ಶೇ 9.95 ನಡುವೆ ಇರುತ್ತದೆ.

2. ಎಸ್​ಬಿಐ ಬ್ಯಾಂಕ್: ಇದು ಸಾಲಗಾರನ ಸಿಬಿಲ್ ಸ್ಕೋರ್‌ಗೆ ಅನುಗುಣವಾಗಿ ಶೇ 8.5 ರಿಂದ ಶೇ 9.65 ವರೆಗಿನ ಗೃಹ ಸಾಲದ ಬಡ್ಡಿ ದರ ಹೊಂದಿರುತ್ತದೆ.

3. ಐಸಿಐಸಿಐ ಬ್ಯಾಂಕ್: ಸಂಬಳದ ಸಾಲಗಾರರಿಗೆ ಶೇ 9.25 ರಿಂದ ಶೇ 9.90 ಮತ್ತು ಸ್ವಯಂ ಉದ್ಯೋಗಿಗಳಿಗೆ ಶೇ 9.4 ರಿಂದ ಶೇ 10.05 ರವರೆಗೆ ಬಡ್ಡಿದರಗಳನ್ನು ಒದಗಿಸುತ್ತದೆ. ಸಾಲದ ಮೊತ್ತ ಮತ್ತು ಉದ್ಯೋಗದ ಪ್ರಕಾರದ ಆಧಾರದ ಮೇಲೆ ಬಡ್ಡಿದರ ವ್ಯತ್ಯಾಸ ಕಾಣಬಹುದು.

4. ಪಂಜಾಬ್ ನ್ಯಾಷನಲ್ ಬ್ಯಾಂಕ್: ಕ್ರೆಡಿಟ್ ಸ್ಕೋರ್, ಸಾಲದ ಮೊತ್ತ, ಎಲ್​ಟಿವಿ ಅನುಪಾತ ಮತ್ತು ಸಾಲದ ಅವಧಿಯಂತಹ ಅಂಶಗಳನ್ನು ನಿರ್ಧರಿಸಿ ಗೃಹ ಸಾಲದ ಮೇಲೆ ಶೇ 9.40 ರಿಂದ ಶೇ 11.10ರ ನಡುವೆ ಬಡ್ಡಿದರ ವಿಧಿಸುತ್ತದೆ.

5. ಬ್ಯಾಂಕ್ ಆಫ್ ಬರೋಡಾ: ಇದು ಶೇ 8.4 ರಿಂದ ಶೇ 10.60 ರವರೆಗೆ ಬಡ್ಡಿದರ ವಿಧಿಸುತ್ತದೆ. ಆದರೆ, ಸ್ಥಿರ ದರಗಳು ಶೇ 10.15 ರಿಂದ ಶೇ 11.60 ವರೆಗೆ ಇರಲಿದ್ದು, ವೇತನ ಪಡೆಯುವವನೇ ಅಥವಾ ವೇತನ ಪಡೆಯದವನೇ ಎಂಬುದರ ಮೇಲೆ ಇದರ ಬಡ್ಡಿದರ ನಿರ್ಧಾರವಾಗುತ್ತದೆ.

ಕುಡಿಯೋದು ಬಿಡಬೇಕು ಅಂದ್ಕೊಂಡ್ರೆ ಈ 7 ಕಾರಣಗಳು ನಿಮಗೆ ಆಸರೆ ಆಗುತ್ವೆ