ಚೈತ್ರ ನವರಾತ್ರಿಯಯನ್ನು ಆಚರಿಸುವುದೇಕೆ? ಹಿನ್ನೆಲೆ ತಿಳಿಯಿರಿ

By Rakshitha Sowmya
Apr 01, 2024

Hindustan Times
Kannada

ಚೈತ್ರ ಶುಕ್ಲ ಪ್ರತಿಪದದಿಂದ ಚೈತ್ರ ಶುಕ್ಲ ನವಮಿ ತಿಥಿವರೆಗೆ ಶೈಲಪುತ್ರಿ ದೇವಿಯಿಂದ ಸಿದ್ದಿಧಾತ್ರಿವರೆಗೆ ಪೂಜಿಸಲಾಗುತ್ತದೆ.

ಚೈತ್ರ ಶುಕ್ಲ ಪ್ರತಿಪದದಿಂದ ಚೈತ್ರ ಶುಕ್ಲ ನವಮಿ ತಿಥಿವರೆಗೆ ಶೈಲಪುತ್ರಿ ದೇವೆಯಿಂದ ಸಿದ್ದಿಧಾತ್ರಿವರೆಗೆ ಪೂಜಿಸಲಾಗುತ್ತದೆ.

ಈ ವೇಳೆ ನವದುರ್ಗೆಯರನ್ನು ಪೂಜಿಸುವುದರಿಂದ ಪ್ರತಿಯೊಬ್ಬರಿಗೂ ದೇವಿಯು 9 ವರಗಳನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ. 

ಪುರಾಣದ ಪ್ರಕಾರ ಒಮ್ಮೆ ರಂಭಾಸುರನ ಮಗ ಮಹಿಷಾಸುರನು ತನ್ನ ಕಠಿಣ ತಪಸ್ಸಿನಿಂದ ಬ್ರಹ್ಮನನ್ನು ಒಲಿಸಿಕೊಂಡು ಅಮರತ್ವನ್ನು ಬೇಡುತ್ತಾನೆ.

ಹುಟ್ಟಿದ ಪ್ರತಿ ಜೀವಿಗೂ ಸಾವು ಖಚಿತ. ನೀವು ಬೇರೆ ಏನಾದರೂ ವರ ಕೇಳಬಹುದು ಎಂದು ಬ್ರಹ್ಮನು ಹೇಳುತ್ತಾನೆ. 

ಹಾಗಿದ್ದರೆ ನನಗೆ ಒಂದು ಹೆಣ್ಣಿನಿಂದ ಸಾವು ಬರುವಂತೆ ಆಶೀರ್ವದಿಸು ಎಂದು ಬೇಡುತ್ತಾನೆ. 

ಬ್ರಹ್ಮನು ಮಹಿಷಾಸುರನಿಗೆ ವರ ನೀಡಿದ ನಂತರ ಆತ ಮೂರೂ ಲೋಕಗಳಲ್ಲಿ ತನ್ನ ಅದಿಪತ್ಯ ಸ್ಥಾಪಿಸಲು ಆರಂಭಿಸುತ್ತಾನೆ. ಇದರಿಂದ ಬೇಸತ್ತ ದೇವತೆಗಳು ದೇವಿಯ ಮೊರೆ ಹೋಗುತ್ತಾರೆ.

ಚೈತ್ರ ಮಾಸದ ಶುಕ್ಲಪಕ್ಷದ ಪ್ರತಿಪದದಲ್ಲಿ ಪ್ರತ್ಯಕ್ಷಳಾಗುವ ದೇವಿಯು ಒಂದೊಂದಾಗಿ ತನ್ನ 9 ರೂಪಗಳನ್ನು ತೋರಿಸುತ್ತಾಳೆ. 

ಈ ಕಾರಣದಿಂದಲೇ ಚೈತ್ರ ಶುಕ್ಲ ಪ್ರತಿಪದದಿಂದ ನವಮಿವರೆಗೆ 9 ದಿನಗಳಲ್ಲಿ ನವದುರ್ಗೆಯರನ್ನು ಪೂಜಿಸಲಾಗುತ್ತದೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?