ಮನುಷ್ಯನನ್ನ ಅಂತರಂಗದಿಂದಲೇ ಸುಡುವ 6 ವಿಚಾರಗಳಿವು 

By Reshma
Nov 22, 2024

Hindustan Times
Kannada

ಆಚಾರ್ಯ ಚಾಣಕ್ಯರನ್ನು ದೇಶ ಕಂಡ ಮಹಾನ್ ವಿ‌ದ್ವಾಂಸ ಎಂದು ಕರೆಯಲಾಗುತ್ತದೆ. ಇವರು ಭಾರತದ ಮೊದಲ ಅರ್ಥಶಾಸ್ತ್ರಜ್ಞ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ 

ಇವರು ತಮ್ಮ ನೀತಿಶಾಸ್ತ್ರದಲ್ಲಿ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಅದರಲ್ಲಿ ಮನುಷ್ಯರನ್ನು ಒಳಗಿನಿಂದಲೇ ಸುಡುವ 6 ವಿಚಾರಗಳು ಯಾವುವು ಎಂದು ಕೂಡ ಹೇಳಿದ್ದಾರೆ 

ಚಾಣಕ್ಯರ ಪ್ರಕಾರ ಈ 6 ವಿಚಾರಗಳಿಂದ ಮನುಷ್ಯ ಕುಗ್ಗುತ್ತಾನೆ. ಅವನಿಗೆ ಇದನ್ನು ಬೇರೆಯವರ ಜೊತೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ, ಆ ಕಾರಣಗಳಿಂದ ಮನಸ್ಸಿನಲ್ಲೇ ನೋವು ಅನುಭವಿಸುತ್ತಾನೆ 

ಚಾಣಕ್ಯರ ಪ್ರಕಾರ ಕೆಟ್ಟ ಮನುಷ್ಯರು ಇರುವ ಊರಿನಲ್ಲಿ ವಾಸಿಸುವ ಜನರು ಮನಸ್ಸಿನಲ್ಲಿ ನೋವು ಪಡುತ್ತಿರುತ್ತಾರೆ. ಅವರಿಗೆ ಊರು ಬಿಟ್ಟು ಬರಲು ಕೂಡ ಸಾಧ್ಯವಿರುವುದಿಲ್ಲ 

ಕೆಟ್ಟ ಕೆಲಸವನ್ನು ಮಾಡುವವರ ಕೂಪದಲ್ಲಿ ಅರಿವೇ ಇಲ್ಲದೆ ಸೇರಿಕೊಳ್ಳುವ ವ್ಯಕ್ತಿಗಳು ತಮ್ಮ ಅಧರ್ಮದ ದಾರಿಯ ಬಗ್ಗೆ ಮನಸ್ಸಿನಲ್ಲೇ ದುಃಖಿಸುತ್ತಾರೆ. ಅಲ್ಲದೇ ಅವರಿಗೆ ಇದರಿಂದ ಹೊರ ಬರುವುದು ಕಷ್ಟವಾಗಿರುತ್ತದೆ 

ಆರೋಗ್ಯಕ್ಕೆ ಹಾನಿ ಮಾಡುವ ಆಹಾರ ಸೇವಿಸಿದ ನಂತರ ಮನುಷ್ಯನನ್ನು ಆ ಆಹಾರವು ಒಳಗಿನಿಂದಲೇ ಸುಡುತ್ತದೆ. ಇದರಿಂದ ಕೂಡ ಮನುಷ್ಯ ತೊಂದರೆ ಅನುಭವಿಸುತ್ತಾನೆ 

ಅತಿಯಾದ ಕೋಪವುಳ್ಳ ಹೆಂಡತಿಯ ಬಗ್ಗೆ ಗಂಡನಾದವನಿಗೆ ವಿಪರೀತ ನೋವಿರುತ್ತದೆ. ಅದನ್ನು ಅವನು ಬೇರೆಯವರ ಮುಂದೆ ತೋರಿಸಿಕೊಳ್ಳುವುದು ಕಷ್ಟವಾಗುತ್ತದೆ

ಮೂರ್ಖ ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಮಗನ ಬಗ್ಗೆ ಪೋಷಕರ ಅಂತರಾಳದಲ್ಲಿ ಹೇಳಿಕೊಳ್ಳಲಾರದಷ್ಟು ನೋವಿರುತ್ತದೆ 

ಮಗಳು ವಿಧವೆಯಾದರೆ ಆ ನೋವು ಪೋಷಕರಿಗೆ ಒಳಗಿನಿಂದಲೇ ತಟ್ಟುತ್ತದೆ. ಇದರಿಂದ ಕೂಡ ಪೋಷಕರು ಬಹಳ ನೋವು ಅನುಭವಿಸುತ್ತಾರೆ 

ಗಮನಿಸಿ: ಈ ಮಾಹಿತಿಯು ನಂಬಿಕೆಗಳು, ಧಾರ್ಮಿಕ ಪಠ್ಯ ಮತ್ತು ವಿವಿಧ ಮಾಧ್ಯಮಗಳನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ 

ಭಾಗವತ ಮತ್ತು ಭಗವದ್ಗೀತೆ ನಡುವಿನ ವ್ಯತ್ಯಾಸವೇನು