ಈ 3 ಅಭ್ಯಾಸಗಳು ಮನುಷ್ಯನ ಅದೃಷ್ಟವನ್ನೇ ಬದಲಿಸುತ್ತವೆ; ಚಾಣಕ್ಯರು ಹೇಳಿದ ಬದುಕಿನ ಪಾಠ

By Reshma
Sep 24, 2024

Hindustan Times
Kannada

ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸರು, ಇವರು ತಮ್ಮ ನೀತಿಶಾಸ್ತ್ರ ಪುಸ್ತಕದಲ್ಲಿ ಹಲವಾರು ವಿಚಾರಗಳನ್ನು ಬರೆದಿದ್ದಾರೆ. ಇವರ ನೀತಿಗಳು ಇಂದಿಗೂ ನಮ್ಮ ಬದುಕಿಗೆ ಅನ್ವಯವಾಗುವಂಥವು 

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವೆಲ್ಲಾ ಗುಣಗಳನ್ನು ಅಳವಡಿಸಿಕೊಳ್ಳುತ್ತಾನೆ, ಅದರ ಮೇಲೆ ಅವನ ಬದುಕಿನ ಪ್ರಗತಿಯು ಅವಲಂಬಿತವಾಗಿರುತ್ತದೆ. ಬದುಕಿನಲ್ಲಿ ಯಶಸ್ಸು ಕಾಣಲು ಮನುಷ್ಯನಲ್ಲಿ ಈ 3 ಗುಣಗಳು ಬಹಳ ಮುಖ್ಯ 

ಒಬ್ಬ ವ್ಯಕ್ತಿಯನ್ನ ಅವನ ಜೀವನದುದ್ದಕ್ಕೂ ಪ್ರಗತಿಯ ಹಾದಿಯಲ್ಲಿ ಕಂಡ್ಯೊಯಲು ಈ ಮೂರು ಅಭ್ಯಾಸಗಳು ಬಹಳ ಮುಖ್ಯ ಎಂದು ಚಾಣಕ್ಯ ಹೇಳಿದ್ದಾರೆ 

ಚಾಣಕ್ಯರ ಪ್ರಕಾರ ಶ್ರಮಜೀವಿಯಾಗಿರುವವನು ಶ್ರೀಮಂತನಾಗುತ್ತಾನೆ. ಅಂತಹವರಿಂದ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ 

ಕಷ್ಟಪಟ್ಟು ದುಡಿಯುವವನು ಸದಾ ಸುಖಿ ಎಂದು ಚಾಣಕ್ಯ ಹೇಳುತ್ತಾರೆ. ಅವರ ಪ್ರಕಾರ ಕಷ್ಟಪಟ್ಟು ದುಡಿಯುವ ವ್ಯಕ್ತಿ ತನ್ನ ಶ್ರಮದ ಆಧಾರದ ಮೇಲೆ ಏನನ್ನು ಬೇಕಾದರೂ ಸಾಧಿಸಬಹುದು 

ಕಷ್ಟಪಟ್ಟು ದುಡಿಯುವವನ ಜೇಬು ಎಂದಿಗೂ ಖಾಲಿಯಾಗುವುದಿಲ್ಲ. ಲಕ್ಷ್ಮೀದೇವಿಯು ಸದಾ ಸಂತೋಷದಿಂದ ಅವನಿಗೆ ಆಶೀರ್ವಾದ ಮಾಡುತ್ತಾಳೆ

ಆಚಾರ್ಯ ಚಾಣಕ್ಯರು ದಾನವನ್ನು ಉದಾತ್ತ ಕಾರ್ಯ ಎಂದು ಪರಿಗಣಿಸುತ್ತಾರೆ. ಅವರ ಪ್ರಕಾರ ದಾನ ಮಾಡುವ ವ್ಯಕ್ತಿಯು ಜೀವನದಲ್ಲಿ ಸದಾ ಸಂತೋಷದಿಂದ ಇರುತ್ತಾನೆ, ಅಲ್ಲದೇ ಬದುಕಿನಲ್ಲಿ ಪ್ರಗತಿ ಸಾಧಿಸುತ್ತಾನೆ 

ದಾನದಿಂದ ಸಂಪತ್ತು ಎಂದಿಗೂ ಕಡಿಮೆಯಾಗುವುದಿಲ್ಲ, ಬದಲಿಗೆ ಸಂಪತ್ತು ವೃದ್ಧಿಯಾಗುತ್ತದೆ. ಅವರ ಪ್ರಕಾರ ದಾನ ಮಾಡುವ ವ್ಯಕ್ತಿಯು ಯಾವಾಗಲೂ ಶ್ರೀಮಂತನಾಗುತ್ತಾನೆ 

ಆಚಾರ್ಯ ಚಾಣಕ್ಯರು ಸಮಯವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸುತ್ತಾರೆ. ಅವರ ಪ್ರಕಾರ ಯಶಸ್ಸು ಸಮಯವನ್ನು ಗೌರವಿಸುವ ವ್ಯಕ್ತಿಯನ್ನು ಆರಾಧಿಸುತ್ತದೆ. ಸಮಯಕ್ಕೆ ಪ್ರಾಮುಖ್ಯತೆ ನೀಡುವ ವ್ಯಕ್ತಿ ಎಂದಿಗೂ ಹಿಂದೆ ಬೀಳುವುದಿಲ್ಲ 

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!