ಬಿಳಿ ಬಟ್ಟೆ ಮೇಲಿನ ಚಹಾ ಕಲೆಯನ್ನ ಸುಲಭವಾಗಿ ತೆಗೆದು ಹಾಕಲು ಇಲ್ಲಿದೆ ಮನೆಮದ್ದು

By Reshma
Nov 12, 2024

Hindustan Times
Kannada

ಚಹಾ ಕುಡಿಯುವಾಗ ಅನೇಕ ಬಾರಿ ಬಟ್ಟೆಯ ಮೇಲೆ ಬೀಳುತ್ತದೆ. ನಂತರ ಅದು ಹಳದಿ ಅಥವಾ ಕಂದು ಬಣ್ಣದ ಕಲೆಯಾಗಿ ಉಳಿದು ಬಿಡುತ್ತದೆ, ಅಲ್ಲದೆ ಸುಲಭವಾಗಿ ಕಲೆ ಹೋಗುವುದಿಲ್ಲ 

ಅದರಲ್ಲೂ ಬಿಳಿ ಬಟ್ಟೆಯ ಮೇಲೆ ಚಹಾ ಕಲೆಯಾದರೆ ಅಸಹ್ಯವಾಗಿ ಕಾಣುತ್ತದೆ. ಇದನ್ನು ತೆಗೆದು ಹಾಕಲು ಡ್ರೈ ವಾಶ್‌ಗೆ ಕೊಟ್ಟರೂ ಕೆಲವೊಮ್ಮೆ ಪ್ರಯೋಜನವಾಗುವುದಿಲ್ಲ 

ಬಿಳಿಬಟ್ಟೆಯ ಮೇಲಾಗಿರುವ ಚಹಾ ಕಲೆ ತೆಗೆದುಹಾಕಲು ಇಲ್ಲಿದೆ ಒಂದಿಷ್ಟು ಸಿಂಪಲ್ ಮನೆಮದ್ದು, ಈ ಟ್ರಿಕ್ಸ್ ಮೂಲಕ ಬಿಳಿ ಬಟ್ಟೆ ಮೊದಲಿನಂತೆ ಕಾಣುವ ಹಾಗೆ ಮಾಡಬಹುದು

ಮೊದಲು ಬಟ್ಟೆಯನ್ನು ನೀರಿನಲ್ಲಿ ನೆನೆಸಿ 

ಈಗ ನಿಂಬೆಹಣ್ಣು ಕತ್ತರಿಸಿ ರಸ ತೆಗೆಯಿರಿ. ಇದನ್ನು ಕಲೆ ಇರುವ ಜಾಗಕ್ಕೆ ಹಚ್ಚಿ, ಸ್ವಲ್ಪ ಸಮಯ ಬಿಡಿ 

ನಂತರ ಬಟ್ಟೆಯನ್ನು ಸೋಪ್ ಅಥವಾ ವಾಷಿಂಗ್ ಪೌಡರ್‌ನಿಂದ ತೊಳೆಯಿರಿ. ಇದರಿಂದ ಕಲೆ ಸುಲಭವಾಗಿ ಸ್ವಚ್ಛಗೊಳುತ್ತದೆ 

ಬಿಳಿ ವಿನೇಗರ್ ಅನ್ನು ನೀರಿನೊಂದಿಗೆ ಸಮ ಪ್ರಮಾಣದಲ್ಲಿ ಬೆರೆಸಿ ಮಿಶ್ರಣ ತಯಾರಿಸಿ. ಅದನ್ನು ಕಲೆ ಮೇಲೆ ಹಚ್ಚಿ ಚೆನ್ನಾಗಿ ಉಜ್ಜಿ 

15 ರಿಂದ 20 ನಿಮಿಷಗಳ ನಂತರ ನೀರಿನಲ್ಲಿ ತೊಳೆದರೆ ಕಲೆ ಮಾಯವಾಗಿರುತ್ತದೆ 

ಅಡುಗೆ ಸೋಡಾದ ಸಹಾಯದಿಂದಲೂ ಬಟ್ಟೆಯ ಮೇಲಿನ ಕಲೆಯನ್ನು ಸುಲಭವಾಗಿ ತೆಗೆದು ಹಾಕಬಹುದು 

ಬಟ್ಟೆಯನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ನಂತರ ಅಡುಗೆ ಸೋಡಾ ಹಚ್ಚಿ. ಒಂದು ಗಂಟೆ ಬಿಡಿ. ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ 

ಕಾವೇರಿ ವಿರುದ್ಧ ಸಾಕ್ಷಿ ಹೇಳಿದ ವೈಷ್ಣವ್